ಒಂದು ಸಂಗ್ರಹ ಉಪಯುಕ್ತ ಮಾಹಿತಿಋಷಿ ಮುನಿಗಳ ಸಂತತಿಯನ್ನೇ ಗೋತ್ರ ಎನ್ನುವರು.

ಒಂದು ಸಂಗ್ರಹ ಉಪಯುಕ್ತ ಮಾಹಿತಿ

ಋಷಿ ಮುನಿಗಳ ಸಂತತಿಯನ್ನೇ ಗೋತ್ರ ಎನ್ನುವರು. 

ಹೆಚ್ಚಾಗಿ ಬ್ರಾಹ್ಮಣ ವರ್ಗ ಮತ್ತು ಕ್ಷತ್ರಿಯ ವರ್ಗದವರಿಗೆ ಗೋತ್ರ ಬಗ್ಗೆ ಮಾಹಿತಿ ಸಿಗುತ್ತದೆ. 

ಬೇರೆ ಯಾರಿಗೂ ಗೋತ್ರದ ಬಗ್ಗೆ ಮಾಹಿತಿ ಸಿಗುವುದಿಲ್ಲ.

ಆದರೆ ದೇವಸ್ಥಾನದಲ್ಲಿ ನಿಮ್ಮ ಹೆಸರಲ್ಲಿ ಪೂಜೆ ಮಾಡುವಾಗ ನಿಮ್ಮ ಹೆಸರು, ಜನ್ಮ ನಕ್ಷತ್ರ ಮತ್ತು ಗೋತ್ರ ವಿಚಾರಿಸಿ ನಂತರ ಸಂಕಲ್ಪ ಮಾಡುವರು.

ಕೆಲವರಿಗೆ ತಮ್ಮ ಗೋತ್ರದ ಬಗ್ಗೆ ಯಾವುದೇ ಅರಿವು ಇಲ್ಲದೆ ಚಡಪಡಿಕೆ ಉಂಟಾಗುತ್ತದೆ. ಮನೆಯ ಹಿರಿಯರಿಗೂ ತಿಳಿಯದಿದ್ದಾಗ ಗಾಬರಿಪಡುವ ಅಗತ್ಯವಿಲ್ಲ. 

ಏಕೆಂದರೆ ಜನ್ಮ ನಕ್ಷತ್ರಗಳ ಮೂಲಕವೂ ತಿಳಿಯಬಹುದು.

ಯಾರ ಜನನ ಅಶ್ವನಿ, ಮಘ ಮತ್ತು ಮೂಲ ನಕ್ಷತ್ರಗಳಲ್ಲಾಗಿದ್ದರೆ, 
ಆರಂಭದಲ್ಲಿ ದೆಸೆ ಕೇತು,
 ಹಾಗಾಗಿ ನಿಮ್ಮ ಗೋತ್ರ ಪುರಂದರ ಆಗುತ್ತದೆ. 

ಯಾರ ಜನನ ಭರಣಿ, ಹುಬ್ಬ ಮತ್ತು ಪೂರ್ವಾಷಾಢ ನಕ್ಷತ್ರಗಳಾದರೆ 
ಆರಂಭದ ದೆಸೆ ಶುಕ್ರ. 
ಹಾಗಾಗಿ ನಿಮ್ಮ ಗೋತ್ರ ಭಾರದ್ವಾಜ ಆಗುವುದು.

ಯಾರ ಜನನ ಕೃತಿಕ, ಉತ್ತರೆ ಮತ್ತು ಉತ್ತರ ಆಷಾಢ ನಕ್ಷತ್ರಗಳಾದರೆ 
ಆರಂಭದ ದೆಶೆ ರವಿ. 
ಹಾಗಾಗಿ ಅಗಸ್ತ್ಯ ಗೋತ್ರ ಆಗುವುದು.

 ಯಾರ ಜನನ ರೋಹಿಣಿ, ಹಸ್ತಾ ಮತ್ತು ಶ್ರವಣ ನಕ್ಷತ್ರಗಳಾದರೆ, 
ಆರಂಭದ ದೆಶೆ ಚಂದ್ರ. 
ಹಾಗಾಗಿ ನಿಮ್ಮ ಗೋತ್ರ ಗೌತಮ ಆಗುವುದು.

ಯಾರ ಜನನ ಮೃಗಶಿರ, ಚಿತ್ರ ಮತ್ತು ಧನಿಷ್ಟಗಳಾದರೆ ಆರಂಭದ ದೆಶೆ ಮಂಗಳ 
ಹಾಗಾಗಿ ಗೋತ್ರ ವಿರೂಪಾಕ್ಷ ಆಗುವುದು.

 ಜನನ ಆರಿದ್ರ, ಸ್ವಾತಿ ಮತ್ತು ಶತಭಿಷ ಗಳಾದರೆ ಆರಂಭದ ದೆಸೆ ರಾಹು.
 ಹಾಗಾಗಿ ಗೋತ್ರ ವಾಮದೇವ ಆಗುವುದು.

 ಯಾರ ಜನನ ಪುನರ್ವಸು, ವಿಶಾಖ ಮತ್ತು ಪೂರ್ವಭಾದ್ರವಾಗಿರುತ್ತದೋ 
ಆರಂಭದ ದೆಶೆ ಗುರು. 
ಹಾಗಾಗಿ ನಿಮ್ಮದು ವಸಿಷ್ಠ ಗೋತ್ರ ಆಗಲಿದೆ.

ಯಾರ ಜನನ ಪುಷ್ಯ, ಅನುರಾಧ ಮತ್ತು ಉತ್ತರಭಾದ್ರಗಳಾದರೆ 
ಆರಂಭದ ದೆಶೆ ಶನಿ. 
ಹಾಗಾಗಿ ನಿಮ್ಮದು ಕಾಶ್ಯಪ ಗೋತ್ರ ಆಗುವುದು.

ಯಾರ ಜನನ ಆಶ್ಲೇಷ, ಜ್ಯೇಷ್ಠ ಮತ್ತು ರೇವತಿ ನಕ್ಷತ್ರಗಳಲ್ಲಿ ಆಗಿರುತ್ತದೋ
 ಪ್ರಾರಂಭದ ದೆಶೆ ಬುಧ. 
ಹಾಗಾಗಿ ನಿಮ್ಮದು ಕಾತ್ಯಾಯನ ಗೋತ್ರ ಆಗುವುದು. 

ಎಲ್ಲಾ ಗ್ರಹಗಳ ಕವಚ ಮಂತ್ರ ಪಠಿಸಿದಾಗ ಆಯಾ ಗ್ರಹಗಳ ಗೋತ್ರ ತಿಳಿಯುತ್ತದೆ. ಒಂದೇ ನಕ್ಷತ್ರ, ಗೋತ್ರ ಆದರೆ ಸಂಬಂಧಿತರಲ್ಲಿ  ವಿವಾಹ ಮಾಡಬಾರದು.
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
ಶುಭವಾಗಲಿ ಧನ್ಯವಾದಗಳು .🙏

Post a Comment

Previous Post Next Post