೧. ಮತಾಂತರಗೊಂಡ ಬುಡಕಟ್ಟು ಜನಾಂಗದ ವ್ಯಕ್ತಿಯ ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ


'ಛತ್ತೀಸಗಢದ ಬುಡಕಟ್ಟು ಜನಾಂಗದ ಯುವಕ ರಮೇಶ ಬಧೇಲ್‌ ಕುಟುಂಬದೊಂದಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡನು. 


ಒಂದು ದಿನ ಈ ಕುಟುಂಬವು ಬೇರೆ ಊರಿಗೆ ಹೋಗಿದ್ದಾಗ, ರಮೇಶರ ತಂದೆಯ ನಿಧನವಾಯಿತು.ಹಾಗಾಗಿ ಅವರು ತಂದೆಯ ಅಂತ್ಯಕ್ರಿಯೆಗಾಗಿ ತಮ್ಮ ಬಸ್ತರ ಗ್ರಾಮಕ್ಕೆ ಬಂದರು. ಅಲ್ಲಿ, ಅವನು ಕ್ರೈಸ್ತರಿಗೆ ಮೀಸಲಾದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸುವ ಬದಲು, ಬುಡಕಟ್ಟು ಜನಾಂಗದವರಿಗೆ ಮೀಸಲಾದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದನು. ಆದರೆ ಅದಕ್ಕೆ ವಿರೋಧ ವ್ಯಕ್ತವಾಯಿತು ಮತ್ತು ಈ ವಿಷಯವನ್ನು ಗ್ರಾಮ ಪಂಚಾಯಿತಿಯ ಮುಂದೆ ಇಡಲಾಯಿತು. ಅಲ್ಲಿಯೂ ಹಿಂದೂಗಳು ಮತ್ತು ಗ್ರಾಮ ಪಂಚಾಯತಿಯು 'ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಜನರನ್ನು ಹಿಂದೂ ಸ್ಮಶಾನಗಳಲ್ಲಿ ದಹನ ಮಾಡಲು ಅನುಮತಿಸುವುದಿಲ್ಲ' ಎಂದು ಸ್ಪಷ್ಟವಾಗಿ ಹೇಳಿದೆ. 'ಬಧೇಲ್‌ ಕುಟುಂಬ ಹೆಚ್ಚು ಆಗ್ರಹದಿಂದ ವರ್ತಿಸಿದರೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ' ಎಂದೂ ಅವರು ಹೇಳಿದರು.

೨. ಅಂತ್ಯಸಂಸ್ಕಾರದ ವಿವಾದ ಸರ್ವೋಚ್ಚ ನ್ಯಾಯಾಲಯದ ಅಂಗಳಕ್ಕೆ

ನಂತರ ಈ ವಾದ ಛತ್ತೀಸಗಢ ಉಚ್ಚ ನ್ಯಾಯಾಲಯಕ್ಕೆ ತಲುಪಿತು. ಅಲ್ಲಿಂದ ಅದು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯಪೀಠವು ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಿರಾಕರಿಸಲ್ಪಟ್ಟ ಕಾರಣದಿಂದ ಅವರ ಕುಟುಂಬಕ್ಕೆ ೧೨ ನೇ ದಿನದಂದು ಸರ್ವೋಚ್ಚ ನ್ಯಾಯಾಲಯಕ್ಕೆ ಬರಬೇಕಾದ ವಿಷಯ ದುಃಖಕರ ಎಂದು ಹೇಳಿತು. ವ್ಯಕ್ತಿಯ ಪೂರ್ವಜರು, ಅಜ್ಜ, ಚಿಕ್ಕಪ್ಪ ಅಥವಾ ಅತ್ತೆಯವರನ್ನು ಸಮಾಧಿ ಮಾಡಿದ ಅಥವಾ ದಹನ ಮಾಡಿದ ಸ್ಥಳದ ಪಕ್ಕದಲ್ಲಿ ಹೂಳುವುದರಲ್ಲಿ ಅಥವಾ ದಹನ ಮಾಡುವುದರಲ್ಲಿ ತಪ್ಪೇನು ? ಮೃತರ ವಾರಸುದಾರರಿಗೆ ಅಂತ್ಯ ಕ್ರಿಯೆ ಎಲ್ಲಿ ನಡೆಸಬೇಕೆಂದು ನಿರ್ಧರಿಸುವ ಹಕ್ಕಿಲ್ಲವೇ ?', ಎಂದಿತು.

೩. ಭಾರತದ ಅಡ್ವೊಕೇಟ್‌ ಜನರಲ್‌ ತುಷಾರ್ ಮೆಹತಾ ಅವರಿಂದ ಕಟ್ಟುನಿಟ್ಟಾದ ನೇರ ಯುಕ್ತಿವಾದ

ಅ. ನ್ಯಾಯಾಧೀಶರ ಹೇಳಿಕೆಗೆ ಯುಕ್ತಿವಾದ ಮಾಡುವಾಗ ಭಾರತದ ಅಡ್ವೊಕೇಟ್‌ ಜನರಲ್‌ ತುಷಾರ್ ಮೆಹತಾ ಇವರು, 'ಇದು ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ದಹನ ಮಾಡಲು ಬಿಡದಿರುವ ಬಗೆಗಿನ ವಿಷಯ ಅಲ್ಲ. ಯಾವ ಬುಡಕಟ್ಟು ಜನಾಂಗದವರು ಹಿಂದೂ ಧರ್ಮವನ್ನು ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವರೋ, ಅವರು ಹಿಂದೂ ಬುಡಕಟ್ಟು ಜನಾಂಗದವರಿಗೆ ಮೀಸಲಾದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುವುದರ ವಿಷಯದ ಕುರಿತಾಗಿದೆ. ಇದಕ್ಕೆ ಗ್ರಾಮಸ್ಥರು ಮಾಡಿರುವ ವಿರೋಧ ಸಮರ್ಥನೀಯವಾಗಿದೆ. ಅವರಿಗೆ ಅಂತಹ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡÀಬಹುದು. ಆದ್ದರಿಂದ, ಅರ್ಜಿದಾರರು ಆ ರೀತಿ ವರ್ತಿಸಲು ಸಾಧ್ಯವಿಲ್ಲ. ಮತಾಂತರಗೊಂಡ ಕ್ರೈಸ್ತನ ಅಂತ್ಯಕ್ರಿಯೆಗೆ ಹಿಂದೂಗಳಿಗೆ ಮೀಸಲಾದ ಸ್ಮಶಾನದಲ್ಲಿ ಅವಕಾಶ ನೀಡುವುದು ತಪ್ಪು ಅಡಿಪಾಯ ವಾಗುತ್ತದೆ. ಅದಕ್ಕೆ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯವು ಅನುಮೋದಿಸಿದರೆ, ಅದು ಸಾಮಾನ್ಯ ಜನರು ಒಪ್ಪಿಕೊಳ್ಳದ ಕಾನೂನಾಗಿ ಪರಿಣಮಿಸುತ್ತದೆ. ಆದ್ದರಿಂದ, ಛತ್ತೀಸಗಢ ಉಚ್ಚ ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿ ಸರಿಯಾದ ತೀರ್ಪು ನೀಡಿದೆ. ಇದರಲ್ಲಿ ಸರ್ವೋಚ್ಚ ನ್ಯಾಯಾಲಯವು ಹಸ್ತಕ್ಷೇಪ ಮಾಡಬಾರದು. ದೇಶಾದ್ಯಂತ ಪ್ರತಿಯೊಂದು ಧರ್ಮ ಮತ್ತು ಪಂಗಡದ ಜನರಿಗೆ ಸ್ಮಶಾನಗಳನ್ನು ಕಾಯ್ದಿರಿಸಲಾಗಿದೆ. ಆದ್ದರಿಂದ, ಅವರವರ ಧರ್ಮ ಅಥವಾ ಪಂಗಡದ ಪ್ರಕಾರ ಅಂತ್ಯಕ್ರಿಯೆ ನಡೆಸಬೇಕು. ದಹನದ ನಂತರ, ಆ ಸ್ಥಳದ 'ಕ್ಯಾರೆಕ್ಟರ' (ಸ್ಮಶಾನದಲ್ಲಿ ಆಗುವ ವಿಧಿಗಳು) ಬದಲಾಗುತ್ತವೆ, ಹಾಗೆಯೇ ಪವಿತ್ರ ಮತ್ತು ಅಪವಿತ್ರವೆಂದು ಈ ವಿಷಯಗಳನ್ನು ನಂಬಲಾಗುತ್ತವೆ,'' ಎಂದರು.

 ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

ಆ. ನ್ಯಾಯಾಧೀಶರಿಗೆ ಅಡ್ವೊಕೇಟ್‌ ಜನರಲ್‌ ತುಷಾರ್ ಮೆಹತಾ ಅವರ ವಾದವನ್ನು ಒಪ್ಪಿಕೊಳ್ಳಲು ಆಗಲಿಲ್ಲ. ಅವರು 'ದಹನದ ನಂತರ ಮೂರನೇ ದಿನ, ಅಲ್ಲಿ ಏನೂ ಬಾಕಿ ಉಳಿದಿರುವುದಿಲ್ಲ. ಹೀಗಿರುವಾಗ ಪವಿತ್ರತೆ ಇತ್ಯಾದಿ ಅಂಶಗಳು ಎಲ್ಲಿ ಬರುತ್ತವೆ ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್‌ ಜನರಲ್‌ ಮೆಹತಾ, 'ಇದು ಯಾವುದೇ ಒಬ್ಬ ವ್ಯಕ್ತಿಯನ್ನು ಸಂತೋಷ ಪಡಿಸುವ ಅಥವಾ ಅಸಮಾಧಾನಗೊಳಿಸುವ ಪ್ರಶ್ನೆಯಲ್ಲ, ಆದರೆ ಸಮಾಜ, ಧರ್ಮ ಮತ್ತು ಪಂಥದ ಪ್ರಕಾರ ಸ್ಮಶಾನಗಳನ್ನು ದಹನಕ್ಕಾಗಿಯೇ ಮೀಸಲಿಡಲಾಗಿದೆ' ಎಂದು ಹೇಳಿದರು. ಅವರ ಅಂತ್ಯಕ್ರಿಯೆಯನ್ನು ಬೇರೆ ಕಡೆಗೆ ಮಾಡಬಾರದು, ಅಲ್ಲೇ ನಡೆಸಬೇಕು ಎಂಬ ಪರಂಪರೆಯನ್ನು ಪಾಲಿಸಲಾಗುತ್ತದೆ. ಇಲ್ಲಿ ಸರ್ವಧರ್ಮಸಮಭಾವ ಇತ್ಯಾದಿ ತತ್ತ್ವಗಳು ಬರುವುದಿಲ್ಲ. ಅಂತ್ಯಕ್ರಿಯೆಯನ್ನು ಪದ್ಧತಿಗಳು ಮತ್ತು ಸಂಪ್ರದಾಯಗಳ ಪ್ರಕಾರ ನಡೆಸಲಾಗುತ್ತದೆ. ಇಲ್ಲಿ, ಇದು ಯಾರ ಹಕ್ಕುಗಳು ಅಥವಾ ಕರ್ತವ್ಯಗಳ ವಿಷಯವಲ್ಲ, ಬದಲಿಗೆ ಸಂಪ್ರದಾಯವನ್ನು ಅನುಸರಿಸುವುದು ಅವಶ್ಯಕ.

ಕ್ರೈಸ್ತರಿಗೆ ಮೀಸಲಿರುವ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲು ಸಾಧ್ಯವಿದ್ದರೂ, ಹಿಂದೂ ಬುಡಕಟ್ಟು ಜನಾಂಗದವರ ಸ್ಮಶಾನಕ್ಕೆ ಹೋಗಿ ಅಂತಿಮ ವಿಧಿವಿಧಾನಗಳನ್ನು ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸುವುದು ತಪ್ಪು. ಆದ್ದರಿಂದ, ಈ ಅರ್ಜಿಯನ್ನು ವಜಾಗೊಳಿಸಬೇಕು.

ಇ. ಈ ಸಮಯದಲ್ಲಿ, ನ್ಯಾಯಾಲಯದಲ್ಲಿ ಕ್ರೈಸ್ತ ವಕೀಲರಾದ ಕಾಲಿನ್‌ ಗೊನ್ಸಾಲ್ವಿಸ್‌ ಮತ್ತು ತುಷಾರ್ ಮೆಹತಾ ಇವರ ನಡುವೆ ವಾಗ್ವಾದ ನಡೆಯಿತು. ಕಾಲಿನ್‌ ಗೊನ್ಸಾಲ್ವಿಸ್‌ ಇಲ್ಲಿ 'ಅಸ್ಪೃಶ್ಯರು' ಎಂಬ ಪದವನ್ನು ಬಳಸಿದ್ದಾರೆ. ವಕೀಲ ಗೊನ್ಸಾಲ್ವಿಸ್‌ 'ಇದು ಕ್ರೈಸ್ತರನ್ನು ಹೊರಹಾಕುವ ಕುತಂತ್ರ' ಎಂದು ಹೇಳಿದರು. ಇದಕ್ಕೆ ಅಡ್ವೊಕೇಟ್‌ ಜನರಲ್‌ ಮೆಹತಾ ದೃಢವಾಗಿ, 'ನೀವು ಯಾವ ರೀತಿಯ ಕ್ರೈಸ್ತರ ಬಗ್ಗೆ ಮಾತನಾಡುತ್ತಿದ್ದೀರಿ ? ಇಲ್ಲಿ ಶುದ್ಧ ಕ್ರೈಸ್ತನಿಲ್ಲ ಮತ್ತು ಪ್ರತಿಯೊಬ್ಬ ಕ್ರೈಸ್ತನೂ ಮತಾಂತರಗೊಂಡವನೇ. ಆದ್ದರಿಂದ, ತಮ್ಮ ಧರ್ಮವನ್ನು ಬದಲಾಯಿಸಿದ ನಂತರ ಬುಡಕಟ್ಟು ಜನಾಂಗದವರು ಅವರ ಸ್ಮಶಾನಗಳ ಮೇಲೆ ಅಧಿಕಾರ ಚಲಾಯಿಸುವುದು ಸೈದ್ಧಾಂತಿಕವಾಗಿ ಮತ್ತು ಕಾನೂನುಬದ್ಧವಾಗಿ ತಪ್ಪು' ಎಂದು ಹೇಳಿದರು.

೪. ಕಾಲಾನುಸಾರ ನ್ಯಾಯದಾನ ಆಗುವುದು ಆವಶ್ಯಕ

ಈ ಪ್ರಕರಣದಲ್ಲಿ, ಮತಾಂತರಗೊಂಡ ಕ್ರೈಸ್ತರ ದುರ್ವಿಚಾರ ಕಾಣಿಸುತ್ತದೆ. ಬುಡಕಟ್ಟು ಜನಾಂಗದವರಿಗೆ ಮೀಸಲಾದ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಜಾಗಬೇಕು ಎಂಬ ಬೇಡಿಕೆಯ ಹಿಂದೆ ಕಲುಷಿತ ಬುದ್ಧಿಯಿದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯವು ಗುರುತಿಸಬೇಕು. ಹಾಗಾಗಿ ಇಲ್ಲಿ ದುಃಖ ವ್ಯಕ್ತಪಡಿಸಲು ಯಾವುದೇ ಕಾರಣವಿಲ್ಲ. ಭಾವನಾತ್ಮಕವಾಗಿ ನ್ಯಾಯದಾನವನ್ನು ಮಾಡುವ ಬದಲು ನ್ಯಾಯವನ್ನು ಬಯಸುವ ವ್ಯಕ್ತಿಯು ಯಾವ ವಿಚಾರ ಮತ್ತು ಬುದ್ಧಿಯೊಂದಿಗೆ ನಿಮ್ಮ ಮುಂದೆ ಬಂದಿದ್ದಾನೆ ಎಂಬುದನ್ನು ಗುರುತಿಸುವುದು ಕಾಲದ ಆವಶ್ಯಕತೆ ಆಗಿದೆ.

- (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೪.೨.೨೦೨೫)

📰 ನ್ಯೂಸ್ ಮತ್ತು ವಿಶೇಷ

Post a Comment

Previous Post Next Post