ಪಾಕಿಸ್ತಾನದ ಹೇಳಿಕೆಗೆ ಭಾರತ ತಕ್ಕ ಉತ್ತರ ನೀಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಭದ್ರತೆಗೆ ಪಾಕಿಸ್ತಾನದ ಸಕ್ರಿಯ ಪ್ರಚಾರ ಮತ್ತು ಪ್ರಾಯೋಜಕತ್ವವು ದೊಡ್ಡ ಅಡ್ಡಿಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಇಂದು ಹೇಳಿದೆ. ಪಾಕಿಸ್ತಾನ ಮಾಡಿದ ಹೇಳಿಕೆಗಳ ಕುರಿತು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಸುಳ್ಳುಗಳನ್ನು ಹರಡುವ ಬದಲು, ಪಾಕಿಸ್ತಾನವು ತನ್ನ ಅಕ್ರಮ ಮತ್ತು ಬಲವಂತದ ಆಕ್ರಮಣದಲ್ಲಿರುವ ಭಾರತೀಯ ಪ್ರದೇಶವನ್ನು ಖಾಲಿ ಮಾಡಬೇಕು ಎಂದು ಹೇಳಿದರು.
Post a Comment