ನೀರುಣಿಸಿದ ಕೋಮುವಾದಿ ಭೈರಪ್ಪ ! ನೀರು ಕುಡಿಸುತ್ತಿರುವ ದೇವನೂರು !!

ನೀರುಣಿಸಿದ ಕೋಮುವಾದಿ ಭೈರಪ್ಪ ! 
ನೀರು ಕುಡಿಸುತ್ತಿರುವ ದೇವನೂರು !! 

ಸಾಹಿತಿ ಎಸ್.ಎಲ್. ಭೈರಪ್ಪನವರು ಸತತ ನಾಲ್ಕೈದು ವರ್ಷ ಪ್ರಯತ್ನ ಮಾಡಿ, ಅವರಿವರಲ್ಲಿ ಕಾಡಿ ಬೇಡಿ, ಪತ್ರಕರ್ತ ವಿಶ್ವೇಶ್ವರ ಭಟ್ಟರ ಮುಖಾಂತರ ಅಂದಿನ ಮುಖ್ಯಮಂತ್ರಿಗಳ ಸಮಯ ತೆಗೆದುಕೊಂಡು ಮಾತಾಡಿ, ನಿರಂತರವಾಗಿ ವಿಚಾರಿಸುತ್ತಾ, ಅಧಿಕಾರಿಗಳ ಮೇಲೆ ಒತ್ತಡ ಹಾಕಿಸುತ್ತಾ, ಇಪ್ಪತ್ತೈದು ಕೋಟಿ ಬಿಡುಗಡೆ ಮಾಡಿಸಿಕೊಂಡು ತಾವು ಹುಟ್ಟಿದ ಚನ್ನರಾಯಪಟ್ಟಣದ ಸಂತೇಶಿವರ ಮತ್ತು ಸುತ್ತಮುತ್ತಲ ಮೂವತ್ತು ಗ್ರಾಮಗಳಿಗೆ ನೀರು ತಂದು ಕೆರೆಗಳನ್ನು ತುಂಬಿಸಲು ಕೊನೆಗೂ ಯಶಸ್ವಿಯಾದರಂತೆ! ಇದೀಗ ಅವರ ಹುಟ್ಟೂರಿನ ಕೆರೆ ಮತ್ತು ಸುತ್ತಮುತ್ತಲ ಸುಮಾರು ಇಪ್ಪತ್ತು ಊರಿನ ಕೆರೆಗಳು ಭರ್ತಿಯಾಗುತ್ತಿವೆಯಂತೆ!!

ಕೋಮುವಾದಿ ಭೈರಪ್ಪನವರೇ ಇಷ್ಟು ಮಾಡಿರುವಾಗ, ಇನ್ನು ಅವರ ಮನೆಯಿಂದ ಎರಡೇ ಕ್ರಾಸು ಅಂತರದಲ್ಲಿ ಬದುಕುತ್ತಿರುವ ಸೆಕ್ಯುಲರ್ ಸಾಹಿತಿ ದೇವನೂರು ಮಹಾದೇವ ಅವರು ತಮ್ಮ‌ ಊರಿಗೆ ಇನ್ನೆಷ್ಟು ಕೆಲಸ ಮಾಡಿಸಿರಬಹುದು?

ಅದರಲ್ಲೂ ಅವರು ಭೈರಪ್ಪ ಅವರಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಇನ್ಯಾರನ್ನೋ ಅವಲಂಬಿಸುವ ಅಗತ್ಯವೂ ಇಲ್ಲ. ಸ್ವತಃ ಈ ನಾಡಿನ ಮುಖ್ಯಮಂತ್ರಿಗಳೇ ಅವರ ಹೋಗೋ ಬಾರೋ ಫ಼್ರೆಂಡ್! ಒಂದು ಕರೆ ಮಾಡಿದರೆ ಮರುದಿನ ಮುಖ್ಯಮಂತ್ರಿಗಳೇ ಅವರ ಮನೆಯ ಮುಂದೆ ಹಾಜರಿರುತ್ತಾರೆ.

ಇಷ್ಟೊಂದು ಪ್ರಭಾವಿಯಾಗಿರುವ ದೇವನೂರು ಮಹಾದೇವ ಅವರು ಮನಸ್ಸು ಮಾಡಿದರೆ ಒಂದು ಟೀ ಕುಡಿದು ಏಳುವಷ್ಟರಲ್ಲಿ ಅನ್ಯ ಉದ್ದೇಶಗಳಿಗೆ ಬಳಕೆಯಾಗಿರುವ SCSP-TSP ಅಷ್ಟೂ ಹಣವನ್ನು ಮತ್ತೆ SC ST ಸಮುದಾಯಗಳಿಗೆ ಕೊಡಿಸಿಬಿಡಬಹುದು.

ಇಷ್ಟೊಂದು ಪ್ರಭಾವಿಯಾಗಿರುವ ದೇವನೂರು ಮಹಾದೇವ ಅವರು ಮನಸ್ಸು ಮಾಡಿದರೆ ಎರಡು ಬೀಡಿ ಸೇದಿ ಮುಗಿಯುವಷ್ಟರಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ಸರ್ಕಾರವನ್ನು ಒಪ್ಪಿಸಿಬಿಡಬಹುದು.

ಇಷ್ಟೊಂದು ಪ್ರಭಾವಿಯಾಗಿರುವ ದೇವನೂರು ಮಹಾದೇವ ಅವರು ಮನಸ್ಸು ಮಾಡಿದರೆ ಮೂರೇ ಗಂಟೆಯಲ್ಲಿ ದಲಿತ ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯ ತಡೆಗೆ ಹೊಸ ವಿಧೇಯಕವೇ ಮಂಡನೆಯಾಗಿ ಜಾರಿಯಾಗುವಂತೆ ಮಾಡಬಹುದು.

ಇಷ್ಟೊಂದು ಪ್ರಭಾವಿಯಾಗಿರುವ ದೇವನೂರು ಮಹಾದೇವ ಅವರು ಮನಸ್ಸು ಮಾಡಿದರೆ ನಾಲ್ಕೇ ದಿನದಲ್ಲಿ ದೇವನೂರು ಮತ್ತು ಸುತ್ತಮುತ್ತಲಿನ ಐವತ್ತು ಗ್ರಾಮಗಳ ಅಷ್ಟೂ ಕನ್ನಡ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತಲೂ ಚೆನ್ನಾಗಿ ಅಭಿವೃದ್ಧಿಪಡಿಸಬಹುದು.

ಇಷ್ಟೊಂದು ಪ್ರಭಾವಿಯಾಗಿರುವ ದೇವನೂರು ಮಹಾದೇವ ಅವರು ಮನಸ್ಸು ಮಾಡಿದರೆ ಐದೇ ನಿಮಿಷಗಳಲ್ಲಿ ಹತ್ತಾರು ಹೋಳುಗಳಾಗಿ ಒಡೆದುಹೋಗಿರುವ ತಮ್ಮದೇ ಸಂಘಟನೆಗಳನ್ನು ಒಂದುಮಾಡಿಬಿಡಬಹುದು. 

ಆದರೆ RSS ಅವರಿಗೆ ಇದ್ಯಾವುದನ್ನೂ ಮಾಡಲು ಬಿಡುತ್ತಿಲ್ಲ :-(  

ಈ ಸಂದರ್ಭದಲ್ಲಿ ಹೆಚ್ಚೆಂದರೆ ಅವರು ಗ್ಯಾರಂಟಿ ಅನುಷ್ಠಾನ ಸಮಿತಿಗೆ ತಮ್ಮವರು ಯಾರನ್ನಾದರೂ ನೇಮಿಸುವ ಪ್ರಯತ್ನ ಮಾಡಲು ಮಾತ್ರ ಸಾಧ್ಯ ಅಷ್ಟೆ  -

-  ಪ್ರವೀಣಕುಮಾರ್ ಮಾವಿನಕಾಡು

*ಸಾಂದರ್ಭಿಕ ಚಿತ್ರ

Post a Comment

Previous Post Next Post