ವಿಶೇಷ ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಮೂರ್ತಿ ಗಜಾನನ ಭಟ್ ಅವರು ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟಂಬದವರಿಗೆ ಮಾಡು ಇಲ್ಲವೇ ಮಡಿ ಎನ್ನುವಂತಿದೆ.
ಒಂದು ವೇಳೆ ನ್ಯಾಯಾಲಯ ಲೋಕಾಯುಕ್ತ ತನಿಖಾ ವರದಿಯನ್ನು ಎತ್ತಿ ಹಿಡಿದರೆ, ಸಿದ್ದರಾಮಯ್ಯ ಅವರಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಗೆಲುವು ಸಿಗಲಿದೆ. ಒಂದು ವೇಳೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಲೋಕಾಯುಕ್ತ ವರದಿಯನ್ನು ತಿರಸ್ಕರಿಸಿದರೆ ಬಹುದೊಡ್ಡ ಕಾನೂನಿನ ಸಂಕಷ್ಟ ಎದುರಾಗಲಿದೆ. ಹೀಗಾಗಿ ಈ ತೀರ್ಪು ಕೇವಲ ಸಿದ್ದರಾಮಯ್ಯಗೆ ಮಾತ್ರವಲ್ಲದೆ, ರಾಜಕೀಯವ ವಲಯದಲ್ಲೂ ಹೆಚ್ಚಿನ ಮಹತ್ವ ಪಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬ ಸದಸ್ಯರ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್‌ಗೆ ಇ.ಡಿ ಆಕ್ಷೇಪ ವ್ಯಕ್ತಪಡಿಸಿ, ವಿ.2ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿತ್ತು.
ಕಳೆದ ಬುಧವಾರ ವಿಚಾರಣೆ ವೇಳೆ ಇ.ಡಿ ತಕರಾರು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಲೋಕಾಯುಕ್ತ ಪೊಲೀಸರ ಪರ ವಕೀಲ ವೆಂಕಟೇಶ್ ಅರಬಟ್ಟಿ, ಇ.ಡಿ ಅರ್ಜಿಗೆ ಕಾನೂನಿನಲ್ಲಿ ಅವಕಾಶವಿಲ್ಲ, ಅರ್ಜಿಯಲ್ಲಿ ತನಿಖೆ ಬಗ್ಗೆ ಸ್ಪಷ್ಟತೆಯೂ ಇಲ್ಲ, ಲೋಕಾಯುಕ್ತ ಪೊಲೀಸರು ಇ.ಡಿಯು ಒಂದು ಪತ್ರ ಮತ್ತು 27 ದಾಖಲೆಗಳನ್ನು ನೀಡಿತ್ತು. ಲೋಕಾಯುಕ್ತ ತನಿಖಾಧಿಕಾರಿಯು ಈ ದಾಖಲೆಗಳನ್ನು ಪರಿಗಣಿಸಿ ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ವಾದಿಸಿದ್ದರು.
ಅಲ್ಲದೆ ಇ.ಡಿ ಪತ್ರ, ದಾಖಲೆಗಳನ್ನು ಆರೋಪಪಟ್ಟಿಯ ಪುಟ ಸಂಖ್ಯೆ 646ರಲ್ಲಿ ಸಲ್ಲಿಸಲಾಗಿದೆ. ಅಲ್ಲದೇ ಲೋಕಾಯುಕ್ತ ತನಿಖಾಧಿಕಾರಿಯ ಅಭಿಪ್ರಾಯವನ್ನೂ ದಾಖಲಿಸಲಾಗಿದೆ. ಈಡಿ ಬಿ ರಿಪೋರ್ಟ್ ಪ್ರಶ್ನಿಸಲು ಅರ್ಪನಾದ ನೊಂದ ವ್ಯಕ್ತಿಯಲ್ಲ, ಇ.ಡಿಗೆ ಈ ರೀತಿಯ ಮಧ್ಯಂತರ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ವೆಂಕಟೇಶ್ ಅಂಬಟ್ಟಿ ಅವರು ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದ್ದರು.
ತನಿಖಾಧಿಕಾರಿ ಕಲೆ ಹಾಕಿದ ದಾಖಲೆಗಳು, ಇತರರು ನೀಡಿದ ದಾಖಲೆ ಎಲ್ಲವನ್ನೂ ಪರಿಶೀಲಿಸಿ ಲೋಕಾಯುಕ್ತ ತನಿಖಾಧಿಕಾರಿ ಅಭಿಪ್ರಾಯ ನೀಡಿದ್ದಾರೆ. 3ನೇ ವ್ಯಕ್ತಿಯಾದ ಇ.ಡಿಗೆ ಅವಕಾಶ ನೀಡಿದರೆ ಸಮಸ್ಯೆಯಾಗಲಿದೆ. ಹೀಗಾಗಿ ಇ.ಡಿ ಅರ್ಜಿ ಪರಿಗಣಿಸದಂತೆ ಲೋಕಾಯುಕ್ತ ಪರ ವಕೀಲರು ಮನವಿ ಮಾಡಿದ್ದರು.
ವಿಜಯ್ ಮದನ್ ಲಾಲ್ ಚೌಧರಿ ಪ್ರಕರಣದಲ್ಲಿ ಇ.ಡಿ ಅಧಿಕಾರ ಸ್ಪಷ್ಟಪಡಿಸಲಾಗಿದೆ. 2022ರಲ್ಲಿಯೂ ಮಾರ್ಟನ್ ತೀರ್ಪು, ನಾಗರಾಜ್ ತೀರ್ಪುಗಳಿವೆ. ಇ.ಡಿ ಅಧಿಕಾರ ಸಮರ್ಥಿಸುವ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. ಇ.ಡಿ ಸ್ಥಳೀಯ ಪೊಲೀಸರ ತನಿಖೆ ಪರಸ್ಪರ ಪೂರಕವಾಗಿರಬೇಕೆಂದು ತೀರ್ಪಿದೆ. ಈ ಕೇಸ್‌ಗಳಲ್ಲಿ ನೊಂದ ವ್ಯಕ್ತಿಗಳಿಗೆ ಮುಖವಿರಬೇಕೆಂದಿಲ್ಲ. ಇ.ಡಿ ಕೂಡಾ ಬಿ.ರಿಪೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಬಹುದೆಂದು ವಾದ ಮಂಡಿಸಿದ್ದರು.
ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಕೆಗೂ ಮುನ್ನ ದೂರುದಾರರಿಗೆ ನೋಟಿಸ್ ನೀಡಿಲ್ಲ. ತನಿಖಾಧಿಕಾರಿಗಳಿಗೆ ನಷ್ಟವಾಗಿದೆ. ಆರೋಪ ಸಾಬೀತಾಗಿಲ್ಲ ಎನ್ನುತ್ತಾರೆ. ಹೀಗಾದರೆ ಹೋರಾಟಗಾರರು ಏನು ಮಾಡಬೇಕು. ಲೋಕಾಯುಕ್ತ ತನಿಖಾಧಿಕಾರಿ ಮೇಲೆ ಕಾನೂನು ಕ್ರಮ ಆಗಬೇಕು. ಇ.ಡಿ ಪತ್ರ ಮಾಧ್ಯಮಗಳಿಗೂ ಸೋರಿಕೆಯಾಗಿತ್ತು. ಆ ಪತ್ರ ಮತ್ತು ದಾಖಲೆಗಳನ್ನು ಆರೋಪಪಟ್ಟಿಯ ಪುಟ ಸಂಖ್ಯೆ 646ರಲ್ಲಿ ಸಲ್ಲಿಸಲಾಗಿದೆ. ಲೋಕಾಯುಕ್ತ ತನಿಖಾಧಿಕಾರಿಯ ಅಭಿಪ್ರಾಯವನ್ನೂ ದಾಖಲಿಸಲಾಗಿದೆ. ಇಡಿಯು ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಪ್ರಶ್ನಿಸಲು ಅರ್ಹವಾದ ನೊಂದ ವ್ಯಕ್ತಿಯಲ್ಲ, ಇ.ಡಿಗೆ ಈ ರೀತಿಯ ಮಧ್ಯಂತರ ಅರ್ಜಿ ಸಲ್ಲಿಸಲು ಅವಕಾಶವಿಲ್ಲ, ಎಂದು ಆಕ್ಷೇಪ ವ್ಯಕ್ತಪಡಿಸಿದ ವೆಂಕಟೇಶ್ ಅರಬಟ್ಟಿ ಅವರು ಸುಪ್ರೀಂ ಕೋಟ್ ್ರನ ತೀರ್ಪು ಉಲ್ಲೇಖಿಸಿದ್ದರು.
ತನಿಖೆ ವೇಳೆ ಕಲೆ ಹಾಕಿದ ದಾಖಲೆಗಳು, ಇತರರು ನೀಡಿದ ದಾಖಲೆ ಎಲ್ಲವನ್ನೂ ಪರಿಶೀಲಿಸಿ ಲೋಕಾಯುಕ್ತ ತನಿಖಾಧಿಕಾರಿ ಅಭಿಪ್ರಾಯ ನೀಡಿದ್ದಾರೆ. 3ನೇ ವ್ಯಕ್ತಿಯಾದ ಇ.ಡಿಗೆ ಅವಕಾಶ ನೀಡಿದರೆ ಸಮಸ್ಯೆ ಆಗಲಿದೆ. ಹೀಗಾಗಿ ಇ.ಡಿ ಅರ್ಜಿ ಪರಿಗಣಿಸಬಾರದೆಂದು ಲೋಕಾಯುಕ್ತ ಎಸ್‌ಪಿಪಿ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು.
ನಂತರ ದೂರುದಾರ ಸ್ನೇಹಿಮಹಿ ಕೃಷ್ಣ ಪರ ವಕೀಲರು ವಾದ ಮಂಡಿಸಿ, ಯಾವುದೇ ವ್ಯಕ್ತಿ ಮಾಹಿತಿ ನೀಡಿದರೆ ಅವರನ್ನು ಸಾಕ್ಷಿಯಾಗಿ ಪರಿಗಣಿಸಬೇಕು. ಆದರೆ ಲೋಕಾಯುಕ್ತ ಪೊಲೀಸರು ಒಂದು ರೀತಿ, ಈಡಿ ಮತ್ತೊಂದು ರೀತಿ ವರದಿ. ಇಡಿಯ ವರದಿಯನ್ನು ಲೋಕಾಯುಕ್ತ ಪೊಲೀಸರು ಪರಿಗಣಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಏಪ್ರಿಲ್ 16ಕ್ಕೆ ಆದೇಶ ಕಾಯ್ದಿರಿಸಿತ್ತು.
Post a Comment