ಇದೀಗ ಖ್ಯಾತ ಸಾಹಿತಿ, ಸಿನಿಮಾ ಬರಹಾರ ಮನೋಜ್ ಮುಂತಾಶಿರ್ ಈ ಪ್ರಕರಣ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಅನುರಾಗ್ ಕಶ್ಯಪ್‌ಗೆ ಸವಾಲು ಹಾಕಿದ್ದಾರೆ. ಒಂದಷ್ಟು ಬ್ರಾಹ್ಮಣರ ಫೋಟೋವನ್ನು ಕಳುಹಿಸುತ್ತೇನೆ, ಅನುರಾಗ್ ಕಶ್ಯಪ್, ನೀವು ಯಾರ ಮೇಲೆ ಮೂ* ವಿಸರ್ಜಿಸುತ್ತೀರಿ ಎಂದು ಮನೋಜ್ ಮುಂತಾಶಿರ್ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಕೆಲ ಬ್ರಾಹ್ಮಣ ಸಮುದಾಯದಿಂದು ದೇಶದ ಪ್ರೀತಿ ಪಾತ್ರರಾಗಿರುವ, ದೇಶಕ್ಕಾಗಿ ಕೊಡುಗೆ ನೀಡಿರುವ, ಬಲಿದಾನ ಮಾಡಿರುವ ಕೆಲ ಹೆಸರಗಳ ಪಟ್ಟಿಯನ್ನು ಮುಂತಾಶಿರ್ ಮುಂದಿಟ್ಟಿದ್ದಾರೆ. ಇವರಲ್ಲಿ ಯಾರಿಗೆ ಮೂ* ವಿಸರ್ಜಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.https://www.instagram.com/manojmuntashir?igsh=MjhkNGxqMGFsdmtq
https://www.instagram.com/manojmuntashir?igsh=MjhkNGxqMGFsdmtq
ಮನೋಜ್ ಮುಂತಾಶಿರ್ ಈ ಕುರಿತು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅನುರಾಗ್ ಕಶ್ಯಪ್‌ಗೆ ಕಿವಿಮಾತು ಹೇಳಿದ್ದಾರೆ. ಇದೇ ವೇಳೆ ಬ್ರಾಹ್ಮಣರ ಪಟ್ಟಿ ನೀಡಿ ಸವಾಲು ಹಾಕಿದ್ದಾರೆ. ನಿಮ್ಮ ಆದಾಯ ಕಡಿಮೆ ಇದ್ದರೆ, ಖರ್ಚು ವೆಚ್ಚಗಳನ್ನು ಕಡಿಮೆ ಮಾಡಬೇಕು, ನಿಮ್ಮ ಬಳಿ ಮಾಹಿತಿ ಕೊರತೆ ಇದ್ದರೆ ಮಾತುಗಳನ್ನು ಕಡಿಮೆ ಮಾಡಬೇಕು ಎಂದು ಮನೋಜ್ ಮುಂತಾಶಿರ್ ನೇರವಾಗಿ ಅನುರಾಗ್ ಕಶ್ಯಪ್‌ಗೆ ಸಲಹೆ ನೀಡಿದ್ದಾರೆ. ಬ್ರಾಹ್ಮಣರ ಲೆಗೆಸಿಗೆ ಮಸಿ ಬಳಿಯುವ ಒಂದು ಇಂಚಿನ ಶಕ್ತಿ ಸಾಮರ್ಥ್ಯ ನಿಮ್ಮಲ್ಲಿ ಇಲ್ಲ. ನೀವು ನೀಡಿದ ಪ್ರತಿಕ್ರಿಯೆ ಕುರಿತು ಮಾತನಾಡುವುದಾದರೆ, ನಾನು ನಿಮಗೆ ಕೆಲ ಫೋಟೋಗಳನ್ನು ಕಳುಹಿಸಿತ್ತೇನೆ, ಇದರಲ್ಲಿ ಯಾವ ಬ್ರಾಹ್ಮಣನ ಮೇಲೆ ಮೂ* ವಿಸರ್ಜನೆಗೆ ಬಯಸುತ್ತೀರಿ ಎಂದು ಮನೋಜ್ ಮುಂತಾಶಿರ್ ಪ್ರಶ್ನಿಸಿದ್ದಾರೆ.
ಬಹಿರಂಗ ಕ್ಷಮೆ ಯಾಚಿಸಿ ಮತ್ತೆ ಬ್ರಾಹ್ಮಣ ಸಮುದಾಯ ಅವಮಾನಿಸಿದ್ರಾ ಅನುರಾಗ್ ಕಶ್ಯಪ್?
21 ಸಾಧಕರ ಪಟ್ಟಿ
21 ಫೋಟೋವನ್ನು ನಾನು ಖಂಡಿತವಾಗಿಯು ನಿಮಗೆ ಕಳುಹಿಸುತ್ತೇನೆ. ನೀವು ಹೇಳಿದ ಹಾಗೆ ಮಾಡಿ ನೋಡೋಣ ಎಂದು ಮುಂತಾಶಿರ್ ಸವಾಲು ಹಾಕಿದ್ದರೆ. ಜೊತೆಗೆ 21 ಸಾಧಕರ ಹೆಸರನ್ನು ಮುಂತಶಿರ್ ಹೇಳಿದ್ದಾರೆ. ಅಚಾರ್ಯ ಚಾಣಾಕ್ಯ, ಚಂದ್ರ ಶೇಖರ್ ಅಜಾದ್, ಬಾಜಿರಾವ್ ಬಲ್ಲಾದ್, ಪರಶುರಾಮ, ರಾಮಕೃಷ್ಣ ಪರಮಹಂಸ, ಆದಿ ಶಂಕರಾಚಾರ್ಯ, ಮಂಗಲ್ ಪಾಂಡೆ, ಅಟಲ್ ಬಿಹಾರಿ ವಾಜಪೇಯಿ, ತಾತ್ಯ ತೋಪೆ, ರಾಜ್‌ಗುರು, ರಾಮ್ದಾರಿ ಸಿಂಗ್ ದಿನಕರ್, ಪರ್ ವೀರ್ ಕ್ಯಾಪ್ಟನ್ ಮನೋಜ್ ಪಾಂಡೆ, ಬಾಲ್ ಗಂಗಾಧರ್ ತಿಲಕ್, ಪಂಡಿತ್ ದೀನದಾಳ್ ಉಪಾಧ್ಯಾಯ, ಪಂಡಿತ್ ಶ್ರೀರಾಮರ್ ಶರ್ಮ ಆಚಾರ್ಯ, ಪಂಡಿತ್ ಭೀಮ್‌ಸೇನ್ ಜೋಶಿ, ಸಂಗ್ರೀತ್ ಸಾಮ್ರಾತ್ ತಾನ್‌ಸೇನ್, ಲತಾ ಮಂಗೇಶ್ಕರ್, ರಾಣಿ ಲಕ್ಷ್ಮಿಬಾಯಿ, ಮಹಾ ಕವಿ ಕಾಳಿದಾಸ, ಗೋಸ್ವಾಮಿ ತುಳಿಸಿದಾಸ. ನಿಮ್ಮಂತ ಸಾವಿರ ಜನ ಬ್ರಾಹ್ಮಣ ವಿರೋಧಿಗಳು ಬಂದರೂ ಬ್ರಾಹ್ಮಣರ ಲೆಗಸಿಯನ್ನು ತುಳಿಯಲು ಸಾಧ್ಯವಿಲ್ಲ ಎಂದು ಮನೋಜ್ ಮುಂತಾಶಿರ್ ಹೇಳಿದ್ದಾರೆ.
Post a Comment