2014 ರಿಂದ 2025 ರವರೆಗೆ ಭಾರತದ ಹಜ್ ಕೋಟಾ ಸುಮಾರು 40,000 ರಷ್ಟು ಹೆಚ್ಚಾಗಿದೆ

ಭಾರತದ ಹಜ್ ಕೋಟಾವನ್ನು 2014 ರಲ್ಲಿ 1 ಲಕ್ಷ 36 ಸಾವಿರದಿಂದ 2025 ರಲ್ಲಿ 1 ಲಕ್ಷ 75 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಈ ವರ್ಷ ಮುಖ್ಯ ಕೋಟಾದಡಿಯಲ್ಲಿ 1 ಲಕ್ಷ 22 ಸಾವಿರಕ್ಕೂ ಹೆಚ್ಚು ಯಾತ್ರಿಕರಿಗೆ ಭಾರತದ ಹಜ್ ಸಮಿತಿಯ ಮೂಲಕ ವ್ಯವಸ್ಥೆಗಳನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದೆ. ವಿಮಾನಗಳು, ಸಾರಿಗೆ, ಮಿನಾ ಶಿಬಿರಗಳು, ವಸತಿ ಮತ್ತು ಸೇವೆಗಳು ಸೇರಿದಂತೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಸೌದಿ ಅರೇಬಿಯನ್ ಮಾರ್ಗಸೂಚಿಗಳ ಪ್ರಕಾರ ಪೂರ್ಣಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಉಳಿದ ಕೋಟಾವನ್ನು ವಾಡಿಕೆಯಂತೆ ಖಾಸಗಿ ಪ್ರವಾಸ ನಿರ್ವಾಹಕರಿಗೆ ನೀಡಲಾಗಿದೆ ಎಂದು ಅದು ಹೇಳಿದೆ. ನವೀಕರಿಸಿದ ಸೌದಿ ನಿಯಮಗಳಿಗೆ ಅನುಸಾರವಾಗಿ, 800 ಕ್ಕೂ ಹೆಚ್ಚು ನಿರ್ವಾಹಕರನ್ನು 26 ಸಂಯೋಜಿತ ಹಜ್ ಗುಂಪು ನಿರ್ವಾಹಕರನ್ನಾಗಿ ಒಟ್ಟುಗೂಡಿಸಿ ಅವರಿಗೆ ಕೋಟಾವನ್ನು ಮುಂಚಿತವಾಗಿ ವಿತರಿಸಿದೆ ಎಂದು ಸಚಿವಾಲಯ ಗಮನಿಸಿದೆ.
Post a Comment