ಇದೀಗ ಬಾಲಿವುಡ್ ಖ್ಯಾತ ಗಾಯಕ ಸಲೀಮ್ ಮರ್ಚೆಂಟ್ ಪಹಲ್ಗಾಮ್ ದಾಳಿ ಖಂಡಿಸಿ ಮಾತನಾಡಿದ್ದಾರೆ. ಈ ದಾಳಿಗಳು ಯಾವಾಗ ಅಂತ್ಯಗೊಳ್ಳುತ್ತೆ? ನನ್ನ ಹಿಂದೂ ಸಹೋದರ ಸಹೋದರಿಯರ ಮೇಲಿನ ಈ ದಾಳಿಯನ್ನು ನೋಡುವಂತಾಗಿದೆ. ನನಗೆ ಮುಸ್ಲಿಮ್ ಆಗಿ ನಾಚಿಕೆಯಾಗುತ್ತಿದೆ ಎಂದು ಸಲೀಮ್ ಮರ್ಚೆಂಟ್ ಹೇಳಿದ್ದಾರೆ.
ನೋವು, ಆಕ್ರೋಶ ಹೊರಹಾಕಿದ ಸಲೀಮ್ ಮರ್ಚೆಂಟ್
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಗೆ ಆಕ್ರೋಶ ಹೆಚ್ಚಾಗುತ್ತಿದೆ. 26 ಮಂದಿ ಈ ದಾಳಿಯಲ್ಲಿ ಮೃತರಾಗಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಒಂದೊಂದು ಚಿತ್ರಗಳು, ವಿಡಿಯೋಗಳು ಭಾರತೀಯರ ಕರಳು ಹಿಂಡುತ್ತಿದೆ. ಜೊತೆಗೆ ಆಕ್ರೋಶದ ಕಿಚ್ಚು ಹೆಚ್ಚಿಸಿದೆ. ಈ ಘಟನೆ ಕುರಿತು ಸಲೀಮ್ ಮರ್ಚೆಂಟ್ ವಿಡಿಯೋ ಮೂಲಕ ತಮ್ಮ ನೋವು, ಆಕ್ರೋಶ ಹೊರಹಾಕಿದ್ದಾರೆ.
ನೀನು ಮುಸ್ಲಿಮಾ ಅಂತ ಕೇಳಿದರು, ಇಲ್ಲ ಎನ್ನುತ್ತಿದ್ದಂತೆ ಗುಂಡಿಕ್ಕಿದರು: ಬೆಂಗಳೂರಿನ ಭರತ್ ಅತ್ತೆ ಕಣ್ಣೀರು
ಹಿಂದೂ ಕಾರಣಕ್ಕೆ ಹತ್ಯೆ
ಪಹಲ್ಗಾಮ್‌ನಲ್ಲಿ ಅಮಾಯಕ ಜನರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಹಿಂದೂ ಅನ್ನೋ ಕಾರಣಕ್ಕೆ ಈ ದಾಳಿಯಲ್ಲಿ ಅಮಾಯಕರು ಹತ್ಯೆಯಾಗಿದ್ದಾರೆ, ಮುಸ್ಲಿಮರಲ್ಲ. ಈ ದಾಳಿ ಸಂಘಟಿಸಿ ಅಮಾಯಕರ ಹತ್ಯೆ ಮಾಡಿದವರು ಮುಸ್ಲಿಮರೇ? ಖಂಡಿತ ಅಲ್ಲ ಅವರು ಭಯೋತ್ಪಾದಕರು.ಕಾರಣ ಇಸ್ಲಾಂ ಇದನ್ನು ಹೇಳುವುದಿಲ್ಲ. ಖುರಾನ್ ಶರೀಫ್, ಸುರಾಹ್ ಅಲ್ ಬಖ್‌ರಾಹ್ 256ನೇ ಅಧ್ಯಾಯದಲ್ಲಿ ಧರ್ಮದಲ್ಲಿ ಯಾವುದೇ ಬಲವಂತವಿಲ್ಲ ಎಂದು ಹೇಳಲಾಗಿದೆ. ಇದು ಖರಾನ್ ಷರೀಫಾದಲ್ಲಿ ಹೇಳಲಾಗಿದೆ ಎಂದು ಸಲೀಮ್ ಮರ್ಚೆಂಟ್ ಹೇಳಿದ್ದಾರೆ.
ಮುಸ್ಲಿಮ್ ಆಗಿ ನನಗೆ ನಾಚಿಕೆಯಾಗುತ್ತಿದೆ.
ಅಮಾಯಕ ಹಿಂದೂ ಸಹೋದರ ಸಹೋದರಿಯರ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಕೇವಲ ಹಿಂದೂ ಅನ್ನೋ ಕಾರಣಕ್ಕೆ ಹತ್ಯೆ ಮಾಡಿದ ಈ ದಾಳಿಯನ್ನು ನಾವು ನೋಡುವಂತಾಗಿದೆ. ಒರ್ವ ಮುಸ್ಲಿಮ್ ಆಗಿ ನನಗೆ ನಾಚಿಕೆಯಾಗುತ್ತಿದೆ. ಇದು ಯಾವಾಗ ಅಂತ್ಯಗೊಳ್ಳುತ್ತೆ. ಕಳೆದ 2 -3 ವರ್ಷದಿಂದ ಕಾಶ್ಮೀರದ ಜನರು ಸಮಸ್ಯೆಗಳಿಂದ ಕೊಂಚ ಮುಕ್ತಿ ಪಡೆದು ಸಹಜ ಜೀವನಕ್ಕೆ ಮರಳುತ್ತಿದ್ದರು. ಆದೆರೆ ಈ ದಾಳಿಯಿಂದ ಮತ್ತೆ ಪರಿಸ್ಥಿತಿ ಭಿನ್ನವಾಗಿದೆ. ಮತ್ತದೇ ಸಮಸ್ಯೆ ಎದುರಿಸುತ್ತಿದ್ದಾರೆ. ನನಗೆ ಯಾವ ರೀತಿ ನೋವು, ಆಕ್ರೋಶ ಹೊರಹಾಕಬೇಕು ಅನ್ನೋದೇ ತಿಳಿಯುತ್ತಿಲ್ಲ ಎಂದು ಸಲೀಮ್ ಮರ್ಚೆಂಟ್ ವಿಡಿಯೋ ಮೂೂಲಕ ಹೇಳಿದ್ದಾರೆ.
ತಲೆಬಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಡಿದವರ ಕುಟುಂಬಕ್ಕೆ ಭಗವಂತ ಧೈರ್ಯ ಹಾಗೂ ಶಕ್ತಿ ನೀಡಲಿ. ನೋವು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಸಲೀಮ್ ಮರ್ಚೆಂಟ್ ವಿಡಿಯೋ ಮೂಲಕ ಹೇಳಿದ್ದಾರೆ. ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಹಿಂದೂಗಳ ಮೇಲೆ ದಾಳಿ
ಜಮ್ಮು ಮತ್ತು ಕಾಶ್ಮೀರದ ಮೇಲೆ ಹಿಂದೂಗಳ ಗುರಿಯಾಗಿಸಿ ಈ ದಾಳಿ ನಡೆದಿದೆ. ಆರ್ಟಿಕಲ್ 370 ರದ್ದು ಬಳಿಕ ಸಾರ್ವಜನಿಕರ ಮೇಲೆ ನಡೆದ ಅತೀ ದೊಡ್ಡ ದಾಳಿ ಇದಾಗಿದೆ. ಭಾರತದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿದೆ. ವ್ಯವಸ್ಥಿತವಾಗಿ ಭಾರತದಲ್ಲಿ ಹಿಂದೂಗಳನ್ನು ಗುರಿಯಾಗಿಸುವ ಷ್ಯಡ್ಯಂತ್ರ ನಡೆಯುತ್ತಿದೆ. ಕಾಶ್ಮೀರದಲ್ಲಿ ಉಗ್ರರ ದಾಳಿ ಮೂಲಕ, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ಮೂಲಕ ನಡೆಯುತ್ತಿದೆ. ಹಲವು ರಾಜ್ಯದಲ್ಲಿ ಒಂದೊಂದು ಸ್ವರೂಪದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಭುಗಿಲೆದ್ದ ಆಕ್ರೋಶ: ದೇಶವ್ಯಾಪಿ ಜನರ ಕೂಗು ಒಂದೇ
9000+ ಮ್ಯಾಗಜೀನ್ಸ್ ಎಕ್ಸ್‌ಪ್ಲೋರ್ ಮಾಡಿ
Post a Comment