ಅಂದಾಜು 17 ಮಾದರಿಯ ವೀಸಾಗಳನ್ನು ಭಾರತ ರದ್ದು ಮಾಡಿದೆ. ಎಲ್‌ಟಿವಿ ವೀಸಾ ಅಂದರೆ ಲಾಂಗ್ ಟರ್ಮ್ ವೀಸಾ ಇದ್ದವರನ್ನು ಹೊರತುಪಡಿಸಿ ಮತ್ತೆಲ್ಲರಿಗೂ ಭಾರತದಿಂದ ಹೊರಹೋಗುವಂತೆ ತಿಳಿಸಲಾಗಿದೆ.
ಈ ಬಗ್ಗೆ ಕೇಂದ್ರ ಗೃಹಸಚಿವ ಇಂದು ದೇಶದ ಎಲ್ಲಾ ಸಿಎಂಗಳಿಗೆ ಕರೆ ಮಾಡಿ ಆಯಾ ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಹುಡುಕಿ ಅವರನ್ನು ಗಡಿಪಾರು ಮಾಡುವಂತೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಕರ್ನಾಟಕದಲ್ಲಿರುವ ಪಾಕ್ ಪ್ರಜೆಗಳಲ್ಲಿ ಆತಂಕ ಶುರುವಾಗಿದೆ.
ಮಂಗಳೂರಿನ ಯುವತಿಯರಿಗೆ ಆತಂಕ: ವೀಸಾ ರದ್ದು ಆಗಲಿರುವ ಬೆನ್ನಲ್ಲಿಯೇ ಮಂಗಳೂರಿನಲ್ಲಿರುವ ಇಬ್ಬರು ಪಾಕ್ ಯುವತಿಯರಿಗೆ ಅತಂಕ ಶುರುವಾಗಿದೆ. ಮಂಗಳೂರಿನ ಇಬ್ಬರು ಯುವಕರನ್ನು ಪಾಕ್ ಯುವತಿಯರು ವಿವಾಹವಾಗಿದ್ದರು. ವಿವಾಹ ಸಂಬಂಧದ ಮೂಲಕ ಭಾರತಕ್ಕೆ ಬಂದಿರುವ ಯುವತಿಯರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಇಂಟೇರಿಮ್ ವೀಸಾ ಪಡೆದು ಇವರು ಭಾರತಕ್ಕೆ ಬಂದಿದ್ದಾರೆ. FRRO ಕಚೇರಿಯಿಂದ ನಿರ್ದೇಶನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಕಾಯುತ್ತಿದ್ದಾರೆ. ಕರಾವಳಿಯ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಲವಾರು ಪಾಕಿಸ್ತಾನಿ ಪ್ರಜೆಗಳು ವಾಸವಾಗಿದ್ದಾರೆ. ವಿವಾಹ ಸಂಬಂಧದಲ್ಲಿ ಇರುವ ಭಾರತಕ್ಕೆ ಬಂದಿದ್ದಾರೆ. ಹೀಗಾಗಿ ವಾಪಾಸ್ ಕಳುಹಿಸುವ ವಿಚಾರದಲ್ಲಿ ಪೊಲೀಸ್ ಇಲಾಖೆಗೆ ಗೊಂದಲವಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ, ಎಲ್‌ಟಿವಿ ಹೊರತಾಗಿ ಇರುವ ಎಲ್ಲಾ ವೀಸಾಗಳನ್ನು ರದ್ದು ಮಾಡಿದ್ದು ಉಳಿದವರೆಲ್ಲರೂ ಹೊರಹೋಗಬೇಕು ಎಂದು ತಿಳಿಸಲಾಗಿದೆ.
ತುಮಕೂರಿನಲ್ಲಿ ಮೂವರು ಪಾಕಿಗಳು: ತುಮಕೂರು ಜಿಲ್ಲೆಯಲ್ಲಿ ಮೂವರು ಪಾಕ್ ಪ್ರಜೆಗಳು ವಾಸವಾಗಿದ್ದಾರೆ. ಎಲ್ಲರೂ ಮಹಿಳೆಯರಾಗಿದ್ದಾರೆ. ತುಮಕೂರಿನ ಗಂಡು ಪಾಕಿಸ್ತಾನದ ಯುವತಿ ನಡುವೆ ಮದುವೆ ಆಗಿತ್ತು. ತುಮಕೂರು ನಗರದ ಗಂಡನ ಮನೆಯಲ್ಲೇ ಮೂವರು ಮಹಿಳೆಯರು ಪ್ರತ್ಯೇಕವಾಗಿ ವಾಸವಿದ್ದಾರೆ. ಓರ್ವ ಮಹಿಳೆ 1962 ರಲ್ಲಿ ಮದುವೆಯಾಗಿ ಇಲ್ಲಿಗೆ ಬಂದಿದ್ದರು. ಆ ಮಹಿಳೆ ಭಾರತದ ಪ್ರಜೆ ಎಂದು ಕೋರ್ಟ್ ಘೋಷಣೆ ಮಾಡಿದೆ. ಆದರೆ, ಭಾರತ ಸರ್ಕಾರ ಈವರೆಗೂ ಆಕೆಗೆ ಪೌರತ್ವ ನೀಡಿಲ್ಲ. ಇನ್ನುಳಿದ ಇಬ್ಬರು ಮಹಿಳೆಯರು ಕಳೆದ 10 ವರ್ಷದ ಹಿಂದೆ ಮದುವೆಯಾಗಿ ಬಂದವರು. ಇಬ್ಬರೂ ದೀರ್ಘ ಅವಧಿಯ ವೀಸಾ ಪಡೆದು ಇಲ್ಲಿ ವಾಸವಿದ್ದಾರೆ.
'ಶಾಸಕಾಂಗದ ಅಧಿಕಾರದ ಮಾನ್ಯ, ಕಾನೂನುಬದ್ಧ ಬಳಕೆ..' ವಕ್ಫ್ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಉತ್ತರ
ಮೈಸೂರಿನಲ್ಲಿ 8 ಮಂದಿಯ ವಾಸ:ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ವಾಪಾಸ್ ಕಳಿಸಲು ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಅಧಿಕೃತವಾಗಿ ಯಾವುದೇ ಪಾಕ್ ಪ್ರಜೆಗಳು ವಾಸ ಇಲ್ಲ. ಮೈಸೂರು ನಗರದಲ್ಲಿ ಅಧಿಕೃತವಾಗು 8 ಜನರು ವಾಸವಾಗಿರುವ ಬಗ್ಗೆ ಮಾಹಿತಿ ಇದೆ. 5 ಜನ ವಯಸ್ಕರರು ಮತ್ತು ಮೂವರು ಮಕ್ಕಳು ವಾಸವಾಗಿದ್ದಾಋಏ. ಪಾಕ್ ಪ್ರಜೆಗಳ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಹಾಗೂ ಜಿಲ್ಲಾಡಳಿತ ಕಲೆಹಾಕಿದೆ. ನಗರದಲ್ಲಿ ಇನ್ನು ಯಾರಾದರೂ ವಾಸವಾಗಿದ್ದಾರಾ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಮಾಹಿತಿ ಕಲೆ ಹಾಕಿದ ನಂತರ ಕೇಂದ್ರದ ನಿರ್ದೇಶನ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
Pahalgam Attack: 'ಧರ್ಮ ಕೇಳಿ ಕೊಲ್ಲಲಾಗಿದೆ..' ಹುರಿಯತ್ ಒಪ್ಪಿಕೊಂಡರೂ, ನಮ್ಮವರು ಒಪ್ಪಿಕೊಳ್ಳೋದಿಲ್ಲ!
ಯಾದಗಿರಿಯಲ್ಲಿ ಒಬ್ಬ ಪಾಕ್ ಪ್ರಜೆ: ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ನೀಡಿರು ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಒಬ್ಬ ಪಾಕಿಸ್ತಾನಿ ಪ್ರಜೆ ವಾಸವಿದ್ದಾನೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಇಬ್ಬರು: ಚಿಕ್ಕ್ಕಬಳ್ಳಾಪುರದಲ್ಲಿ ಇಬ್ಬರು ಪಾಕಿಸ್ತಾನ ಪ್ರಜೆಗಳು ಇದ್ದಾರೆ ಎಂದು SP ಕುಶಾಲ್ ಚೌಕ್ಸಿ ಮಾಹಿತಿ ನೀಡಿದ್ದಾರೆ.
Post a Comment