
ಪ್ರಧಾನಿ ನರೇಂದ್ರ ಮೋದಿ ನಾಳೆ ತಮಿಳುನಾಡಿಗೆ ಭೇಟಿ ನೀಡಲಿದ್ದು, ರಾಮನವಮಿಯ ಸಂದರ್ಭದಲ್ಲಿ ರಾಮೇಶ್ವರಂ ಅನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಹೊಸ ಪಂಬನ್ ರೈಲು ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಈ ಸೇತುವೆ ಭಾರತದ ಮೊದಲ ಲಂಬ ಲಿಫ್ಟ್ ಸಮುದ್ರ ಸೇತುವೆಯಾಗಿದೆ. ಪ್ರಧಾನಿಯವರು ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗನ್ನು ಸಹ ಉದ್ಘಾಟಿಸಲಿದ್ದಾರೆ ಮತ್ತು ಸೇತುವೆಯ ಕಾರ್ಯಾಚರಣೆಯನ್ನು ವೀಕ್ಷಿಸಲಿದ್ದಾರೆ.
ಇದಾದ ನಂತರ, ಶ್ರೀ ಮೋದಿ ಅವರು ರಾಮೇಶ್ವರದ ರಾಮನಾಥಸ್ವಾಮಿ ದೇವಾಲಯದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ. ತಮಿಳುನಾಡಿನಲ್ಲಿ 8 ಸಾವಿರದ 300 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ವಿವಿಧ ರೈಲು ಮತ್ತು ರಸ್ತೆ ಯೋಜನೆಗಳಿಗೆ ಅವರು ಶಿಲಾನ್ಯಾಸ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹೊಸ ಪಂಬನ್ ರೈಲು ಸೇತುವೆ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ರಾಮಾಯಣದ ಪ್ರಕಾರ, ರಾಮಸೇತು ನಿರ್ಮಾಣವನ್ನು ರಾಮೇಶ್ವರಂ ಬಳಿಯ ಧನುಷ್ಕೋಡಿಯಿಂದ ಪ್ರಾರಂಭಿಸಲಾಯಿತು.
ರಾಮೇಶ್ವರಂ ಅನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಈ ಸೇತುವೆಯು ಜಾಗತಿಕ ವೇದಿಕೆಯಲ್ಲಿ ಭಾರತೀಯ ಎಂಜಿನಿಯರಿಂಗ್‌ನ ಗಮನಾರ್ಹ ಸಾಧನೆಯಾಗಿದೆ. ಸ್ಟೇನ್‌ಲೆಸ್ ಸ್ಟೀಲ್ ಬಲವರ್ಧನೆ, ಉನ್ನತ ದರ್ಜೆಯ ರಕ್ಷಣಾತ್ಮಕ ಬಣ್ಣ ಮತ್ತು ಸಂಪೂರ್ಣವಾಗಿ ಬೆಸುಗೆ ಹಾಕಿದ ಕೀಲುಗಳಿಂದ ನಿರ್ಮಿಸಲಾದ ಈ ಸೇತುವೆಯು ಹೆಚ್ಚಿದ ಬಾಳಿಕೆ ಮತ್ತು ಕಡಿಮೆ ನಿರ್ವಹಣಾ ಅಗತ್ಯಗಳನ್ನು ಹೊಂದಿದೆ. ಭವಿಷ್ಯದ ಬೇಡಿಕೆಗಳನ್ನು ಪೂರೈಸಲು ಇದನ್ನು ಡ್ಯುಯಲ್ ರೈಲು ಹಳಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ
Post a Comment