ಇದು ಪಾಕಿಸ್ತಾನಕ್ಕೆ ಬಹುದೊಡ್ಡ ಹಿನ್ನಡೆ ಎಂದೇ ಹೇಳಬಹುದು. ಭಾರತದೊಂದಿಗಿನ ಯುದ್ಧದ ಭೀತಿ ನಡುವೆಯೇ ಟರ್ಕಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ ಎನ್ನುವ ವರದಿಯನ್ನು ಟರ್ಕಿ ತಳ್ಳಿ ಹಾಕಿದೆ.
ಟರ್ಕಿಯಲ್ಲಿ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಭಾರತವು ಸಾಕಷ್ಟು ಸಹಾಯ ಮಾಡಿತ್ತು ಆದರೆ ಭಾರತದ ರಕ್ತ ಹರಿಸಲು ಟರ್ಕಿಯು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ ಎನ್ನವ ವಿಚಾರ ಎಲ್ಲೆಡೆ ಹರಿದಾಡಿತ್ತು. ಆದರೆ ಟರ್ಕಿ ಇದಕ್ಕೆ ಸ್ಪಷ್ಟನೆ ನಿಡಿದ್ದು, ನಾವು ಯಾವುದೇ ಶಸ್ತ್ರಾಸ್ತ್ರಗಳನ್ನು ಕಳುಹಿಸಿಲ್ಲ ಎಂದು ಹೇಳಿದೆ. ಶಸ್ತ್ರಾಸ್ತ್ರಗಳನ್ನು ಹೊತ್ತ ಟರ್ಕಿಶ್ ವಾಯುಪಡೆಯ ಸಿ -130 ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನ ಭಾನುವಾರ ಕರಾಚಿಗೆ ಬಂದಿಳಿದಿತ್ತು ಎನ್ನಲಾಗಿತ್ತು, ಆದರೆ ಟರ್ಕಿಯಿಂದ ಹೊರಟ ಸರಕು ವಿಮಾನ ಇಂಧನ ತುಂಬಲು ಪಾಕಿಸ್ತಾನದಲ್ಲಿ ಇಳಿದಿತ್ತು, ಯಾವುದೇ ಊಹಾಪೋಹಗಳಿಗೂ ಕಿವಿಗೊಡಬೇಡಿ ಎಂದು ಹೇಳಿದೆ.
ಮುಸ್ಲಿಂ ಬಹುಸಂಖ್ಯಾತರಾಗಿರುವ ಈ ಪ್ರದೇಶವು ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲದ ವಿವಾದದ ಕೇಂದ್ರವಾಗಿದೆ. ನಡೆಯುತ್ತಿರುವ ಪ್ರಾದೇಶಿಕ ವಿವಾದವು ಈ ಪರಮಾಣು-ಸಶಸ್ತ್ರ ನೆರೆಹೊರೆಯವರ ನಡುವಿನ ಸಂಬಂಧವನ್ನು ಬಿಗಡಾಯಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಗಮನಾರ್ಹವಾಗಿ ಹದಗೆಟ್ಟಿದ್ದು, ಸಂಭಾವ್ಯ ಮಿಲಿಟರಿ ಸಂಘರ್ಷಗಳ ಬಗ್ಗೆ ವಿಶ್ಲೇಷಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಎರಡೂ ದೇಶಗಳು ತಮ್ಮ ಸಂಕೀರ್ಣ ಭೌಗೋಳಿಕ ರಾಜಕೀಯ ಚಲನಶೀಲತೆಯನ್ನು ಮುಂದುವರೆಸುತ್ತಿರುವುದರಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ.
ಇದಕ್ಕೂ ಮೊದಲು, ಚೀನಾ ಪಾಕಿಸ್ತಾನಕ್ಕೆ ಪಿಎಲ್ -15 ಕ್ಷಿಪಣಿಗಳನ್ನು ಕಳುಹಿಸಿತ್ತು, ಪಾಕಿಸ್ತಾನ ತನ್ನ ಜೆಎಫ್ -17 ಯುದ್ಧ ವಿಮಾನಗಳಲ್ಲಿ ಇವುಗಳನ್ನು ಅಳವಡಿಸಿದೆ. ಪಾಕಿಸ್ತಾನ ಮತ್ತು ಟರ್ಕಿಯೆ ನಡುವೆ ಈಗಾಗಲೇ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳು ನಡೆದಿವೆ. ಇತ್ತೀಚೆಗೆ, ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ, ಶಸ್ತ್ರಾಸ್ತ್ರಗಳ ಕುರಿತು ಎರಡೂ ದೇಶಗಳ ನಡುವೆ ಒಪ್ಪಂದವೂ ಏರ್ಪಟ್ಟಿತು.
ಟರ್ಕಿ ಮತ್ತು ಪಾಕಿಸ್ತಾನಗಳು ಇಸ್ಲಾಮಿಕ್ ಸಹೋದರತ್ವದ ಆಧಾರದ ಮೇಲೆ ತಮ್ಮ ಸ್ನೇಹವನ್ನು ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸಲು ನಿರ್ಧರಿಸಿದ್ದವು. ಟರ್ಕಿ ಹಲವಾರು ಶಸ್ತ್ರಾಸ್ತ್ರ ಒಪ್ಪಂದಗಳಿಗೆ ಸಹಿ ಹಾಕಿದೆ. ಭಾರತದೊಂದಿಗೆ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ವಾಯುಪಡೆಯು ಪೆನ್ಸಿ, ಸ್ಕಾರ್ಡು ಮತ್ತು ಸ್ವಾತ್ ಸೇರಿದಂತೆ ಪ್ರಮುಖ ವಾಯುನೆಲೆಗಳನ್ನು ಸಕ್ರಿಯಗೊಳಿಸಿದೆ. ಈ ಹಿಂದೆ ಟರ್ಕಿ ಜತೆಗೆ ಪಾಕಿಸ್ತಾನ ಕೆಲವು ಒಪ್ಪಂದ ಮಾಡಿಕೊಂಡಿತ್ತು.
ಪ್ರಸ್ತುತ, ಈ ನೆಲೆಗಳಲ್ಲಿ ಎಫ್ -16, ಜೆ -10 ಮತ್ತು ಜೆಎಫ್ -17 ಯುದ್ಧ ವಿಮಾನಗಳನ್ನು ನಿಯೋಜಿಸಲಾಗಿದ್ದು, ಯುದ್ಧ ವಾಯು ಗಸ್ತು (ಸಿಎಪಿ) ಈಗಾಗಲೇ ನಡೆಯುತ್ತಿದೆ. ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Post a Comment