ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವ ರಾಜ್ಯದ ಮಹಿಳೆಯರು ಇನ್ಮುಂದೆ ಸ್ಮಾರ್ಟ್ ಕಾಡ್9 ತೋರಿಸಿದ್ರೆ ಸಾಕು, ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಇನ್ನೆರಡು ತಿಂಗಳಲ್ಲಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ಉಚಿತವಾಗಿ ಕೈಸೇರಲಿದೆ. ಈಗಾಗಲೇ ಹಣಕಾಸು ಇಲಾಖೆಗೆ ಕಡತಕ್ಕೆ ಹೋಗಿದ್ದು ಅನುಮತಿ ಒಂದೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಟೆಂಡರ್ ಕೂಡ ಕರೆಯಲು ಸಾರಿಗೆ ಇಲಾಖೆ ಮುಂದಾಗಿದೆ.
ಮಹಿಳೆಯರು ಸ್ಮಾರ್ಟ್ ಕಾಡ್9 ಬೇಕು ಅಂದರೆ, ಗ್ರಾಮ ಒನ್, ಬೆಂಗಳೂರು ಒನ್ ನಲ್ಲಿ ಅರ್ಜಿ ಹಾಕಿದರೆ, ಸ್ಮಾರ್ಟ್ ಕಾಡ್9 ಸಿಗಲಿದೆ. ಇನ್ನೆರಡು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಸರ್ಕಾರದಿಂದ ಪ್ರತ್ಯೇಕ ಸ್ಮಾರ್ಟ್ ಕಾರ್ಡ್ ವಿತರಣೆ ಇರಲ್ಲ. ಸ್ಮಾರ್ಟ್ ಕಾರ್ಡ್ ಪಡೆಯುವ ವೇಳೆ ನಕಲಿ ಆಧಾರ್ ಕಾರ್ಡ್ ನೀಡಿ ತಗಲಾಕೊಂಡರೆ ನಿಮ್ಮ ಅರ್ಜಿಯನ್ನೇ ರದ್ದುಗೊಳಿಸುವ ಸಾಧ್ಯತೆ ಇರಲಿದೆ.
ಪ್ರಿಂಟ್ ಆದ ಮಾಹಿತಿಯುಳ್ಳ ದಾಖಲೆಯೇ ಸ್ಮಾರ್ಟ್ ಕಾರ್ಡ್ ಆಗಿರಲಿದೆ. ಮಾಸಿಕ ಪಾಸಿನಂತೆ ಪ್ರತ್ಯೇಕ ಪಾಸ್ ವಿತರಣೆ ಇರಲ್ಲ. ಅರ್ಜಿ ಸಲ್ಲಿಸಿದ ಕೂಡಲೇ ನೀಡಲಾಗುವ ಪ್ರಿಂಟ್‍ಔಟ್ ಅನ್ನು ಸ್ಮಾರ್ಟ್ ಕಾರ್ಡ್ ಎಂದು ಪರಿಗಣಿಸಲಾಗುತ್ತದೆ.
ಸೇವಾಸಿಂಧು ವೆಬ್‍ಸೈಟ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆಧಾರ್ ಕಾರ್ಡ್‍ನ್ನು ದಾಖಲೆಯಾಗಿ ಪರಿಗಣಿಸಿ ರಾಜ್ಯದ ಮಹಿಳೆಯರಿಗೆ ಸ್ಮಾರ್ಟ್? ಕಾರ್ಡ್ ವಿತರಣೆ ಮಾಡಲಾಗತ್ತದೆ. ಸೇವಾಕೇಂದ್ರದಲ್ಲಿಯೇ ಸ್ಮಾರ್ಟ್‍ಕಾರ್ಡ್ ಪ್ರಿಂಟ್ ಹಾಕಲಾಗುತ್ತದೆ.
ನಮ್ಮ ರಾಜ್ಯದ ನಿವಾಸಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ ಕೇವಲ ಕರ್ನಾಟಕದೊಳಗಿನ ವಿಳಾಸ ಇರಬೇಕು. ಶಕ್ತಿ ಯೋಜನೆಯ ಲಾಭಕ್ಕಾಗಿ ಆಧಾರ್ ಕಾರ್ಡ್‍ನಲ್ಲಿ ವಿಳಾಸ ಬದಲಿಸಿಕೊಂಡರೆ ಸ್ಮಾರ್ಟ್ ಕಾರ್ಡ್ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ.
Post a Comment