ರ್ನಾಟಕದಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ, ಹೈಕೋರ್ಟ್‌ನಿಂದ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ದಿನಗೂಲಿ ನೌಕರರಂತೆ ಬೆವರು ಸುರಿಸಿ ದುಡಿಯುತ್ತಿದ್ದ ನೌಕರರು, ತಮ್ಮ ಕೆಲಸದ ಖಾಯಮಾತಿಗಾಗಿ ಹೆಚ್ಚು ವರ್ಷಗಳನ್ನು ತಳ್ಳುವ ಅಗತ್ಯವಿಲ್ಲ.ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ, ಹತ್ತು ವರ್ಷ ಸೇವೆ ಸಲ್ಲಿಸಿದರೆ ಸಾಕು. ಅವರ ಕೆಲಸ ಖಾಯಂ ಆಗುತ್ತದೆ. ಇಂತಹ ಒಂದು ಮಹತ್ವದ ಆದೇಶ ಹೊರಡಿಸುವ ಮೂಲಕ, ಕರ್ನಾಟಕ ಹೈಕೋರ್ಟ್ ರಾಜ್ಯದ ಸಾವಿರಾರು ದಿನಗೂಲಿ ನೌಕರರ ಬದುಕಿಗೆ ಬೆಳಕು ನೀಡಿದೆ.
ಅದೆಷ್ಟೋ ದಿನಗೂಲಿ ನೌಕರರು ತಮ್ಮ ಕೆಲಸ ಇಂದಲ್ಲ, ನಾಳೆ ಖಾಯಂ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ ಅವರ ಪೈಕಿ ಕೆಲವರಿಗೆ ಕೆಲಸ ಖಾಯಂ ಆದರೆ ಇನ್ನೂ ಕೆಲವರಿಗೆ ಜೀವನವಿಡೀ ಖಾಯಮಾತಿ ಇಲ್ಲದ ಕೆಲಸದಲ್ಲೇ ಮುನ್ನಡೆಯಬೇಕು. ಆದರೆ ಈಗ ಹೈಕೋರ್ಟ್ ತನ್ನ ಮಹತ್ವದ ತೀರ್ಪಿನ ಮೂಲಕ, ನಿರಾಸೆ ಹೊತ್ತು ಬದುಕುತ್ತಿದ್ದವರಿಗೆ ಆಶಾಭಾವ ಮೂಡಿಸಿದೆ.
ಅಂದಹಾಗೆ ಆನೇಕಲ್ ವಲಯದ ಅರಣ್ಯ ವೀಕ್ಷಕ ಆಗಿ ಕಳೆದ 30 ವರ್ಷದಿಂದ, ಪಿ.ಜುಂಜಪ್ಪ ಎಂಬುವವರು ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರಯ. ಇಷ್ಟೊಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರೂ ಕೆಲಸ ಪರ್ಮನೆಂಟ್ ಆಗಿಲ್ಲವೆಂದು, ಸಾಕಷ್ಟು ಬಾಗಿ ಸರ್ಕಾರದ ಮೋರೆ ಹೋಗಿದ್ದರು. ತಮ್ಮ ಕೆಲಸ ಖಾಯಂ ಮಾಡಿ ಎಂದು ಮನವಿ ಮಾಡಿದ್ದರು. ಆದರೆ ಅರಣ್ಯ ಇಲಾಖೆ 2016ರಲ್ಲಿ ಅವರ ಸೇವೆಯನ್ನು ಖಾಯಂಗೊಳಿಸಲು ನಿರಾಕರಿಸಿ, ಹಿಂಬರಹ ಪತ್ರ ನೀಡಿ, ಅವಕಾಶ ನಿರಾಕರಿಸಿತ್ತು. ಜುಂಜಪ್ಪ ಈ ತೀರ್ಮಾನವನ್ನ ಪ್ರಶ್ನಿಸಿ ಮೊದಲು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ ಮೆಲುಕು ಹಾಕಿದರು. ಆದರೆ, 2019ರ ಜುಲೈ 31 ರಂದು ಕೆಎಟಿ ಕೂಡ ಆತನ ಅರ್ಜಿಯನ್ನು ವಜಾ ಮಾಡಿದಾಗ, ಜುಂಜಪ್ಪ ಹೈಕೋರ್ಟ್ ಮೆಟ್ಟಿಲು ಏರಿದರು.
ಇನ್ನು ಅರ್ಜಿದಾರರು ಮಂಜೂರಾತಿ ಹುದ್ದೆಯಲ್ಲಿಯೇ ಕೆಲಸ ಮಾಡಿಲ್ಲ ಮತ್ತು ನೇಮಕಾತಿ ಪತ್ರವಿಲ್ಲವೆಂದು ಸರ್ಕಾರದ ಪರ ವಕೀಲರು ಆಕ್ಷೇಪಿಸಿದರು. ಆದರೆ ನ್ಯಾಯಪೀಠ ಈ ಆಕ್ಷೇಪಣೆಗೆ ಒಪ್ಪಲಿಲ್ಲ. ಜುಂಜಪ್ಪ ದಿನಗೂಲಿ ನೌಕರನಾಗಿದ್ದರೂ, ಸರಕಾರದ ಬೇರೆ ನೌಕರರಂತೆ ಕೆಲಸ ಮಾಡಿದ್ದಾರೆ. ನೇಮಕಾತಿ ಪತ್ರವಿಲ್ಲದೆ ಈ ಸೇವೆ ನಿರಾಕರಿಸುವುದು ಅನ್ಯಾಯ ಎಂದು ತೀರ್ಪಿನಲ್ಲಿ ತಿಳಿಸಿದರು. ಅಲ್ಲದೇ ಹೈಕೋರ್ಟ್ ಈ ಮೂಲಕ ಕೆಎಟಿ ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ ಮತ್ತು ಅರಣ್ಯ ಇಲಾಖೆ, ರಾಜ್ಯ ಸರ್ಕಾರಕ್ಕೆ ಜುಂಜಪ್ಪನ ಸೇವೆ ಖಾಯಂಗೊಳಿಸಲು ಸ್ಪಷ್ಟ ಆದೇಶ ನೀಡಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ವಿಭಾಗೀಯ ಪೀಠ, ಜುಂಜಪ್ಪನ ಪರವಾಗಿ ಮಹತ್ವದ ತೀರ್ಪು ನೀಡಿದೆ. ಅದೇನೆಂದರೆ ಔಪಚಾರಿಕ ನೇಮಕಾತಿ ಪತ್ರವಿಲ್ಲ ಎಂಬುದು ಸೇವೆ ಖಾಯಂಗೊಳಿಸದಿರುವ ಏಕೈಕ ಕಾರಣವಲ್ಲ. ನಿರಂತರವಾಗಿ ಸೇವೆ ಸಲ್ಲಿಸಿರುವುದು, ವೇತನ ದಾಖಲೆಗಳು ಮತ್ತು ಇಲಾಖೆಯ ಪತ್ರ ವ್ಯವಹಾರಗಳೇ ಸಾಕ್ಷಿ ಎನ್ನಲಾಗಿದೆ. ಅಲ್ಲದೇ ಮಂಜೂರಾದ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಯು ಖಾಯಂಗೊಳಿಸುವ ಹಕ್ಕಿಗೆ ಅರ್ಹ ಎಂಬುದು ಹೈಕೋರ್ಟ್ ನೀಡಿದ ಪೂರಕ ತೀರ್ಮಾನವಾಗಿದೆ.
ಇನ್ನು ಕರ್ಣಾಟಕ ಹೈಕೋರ್ಟ್‌ನ ಈ ಮಹತ್ವದ ತೀರ್ಪು, ದಿನಗೂಲಿ ನೌಕರರು ಸಹ ಶಾಶ್ವತ ಉದ್ಯೋಗಕ್ಕೆ ಅರ್ಹರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ಹತ್ತು ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ನೌಕರರಿಗೆ ಉದ್ಯೋಗ ಖಾಯಂ ಮಾಡುವ ಕುರಿತು ನೀಡಿದ ಈ ತೀರ್ಪು, ವಿವಿಧ ಕ್ಷೇತ್ರಗಳ ಉದ್ಯೋಗಿಗಳಿಗಾಗಿ ಹೊಸ ಆಶಾವಾದವನ್ನು ಮೂಡಿಸಿದೆ.
ಈ ತೀರ್ಪು ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ನೌಕರರ ಹಕ್ಕುಗಳನ್ನು ಮಾನ್ಯ ಮಾಡುವ ಮತ್ತು ಅವುಗಳನ್ನು ಪರಿಗಣಿಸಿ ಸಂಬಂಧಿಸಿದ ನೀತಿಗಳನ್ನು ಪರಿಷ್ಕರಿಸುವ ಮಹತ್ವಪೂರ್ಣ ಸಂದೇಶವನ್ನು ನೀಡುತ್ತದೆ. ಹೈಕೋರ್ಟ್ ತೀರ್ಪು, ದಿನಗೂಲಿ ನೌಕರರು ತಮ್ಮ ಶ್ರಮಕ್ಕೆ ನ್ಯಾಯ ಮತ್ತು ಸಮ್ಮಾನವನ್ನು ಪಡೆಯಬೇಕೆಂದು ತೋರಿಸುತ್ತದೆ ಮತ್ತು ಭವಿಷ್ಯದಲ್ಲಿ ತಾತ್ಕಾಲಿಕ ಉದ್ಯೋಗಗಳಿಗೆ ಸಂಬಂಧಿಸಿದಂತೆ ನವೀನ ದೃಷ್ಟಿಕೋನವನ್ನು ಒದಗಿಸುತ್ತದೆ.
ಈ ತೀರ್ಪು ಇದೀಗ ರಾಜ್ಯದ ಅನೇಕ ದಿನಗೂಲಿ ನೌಕರರಿಗೆ ಹೊಸ ಆಶಾವಾದವನ್ನು ನೀಡಿದೆ. ವಿವಿಧ ಇಲಾಖೆಗಳಲ್ಲಿ ದಶಕಗಟ್ಟಲೆ ಸೇವೆ ಸಲ್ಲಿಸುತ್ತಿರುವ ಸಾವಿರಾರು ತಾತ್ಕಾಲಿಕ ನೌಕರರಿಗೆ, ಈ ತೀರ್ಪು ಕಾನೂನು ಹಕ್ಕುಗಳ ಬಗ್ಗೆ ಹೊಸ ಬೆಳಕು ಚೆಲ್ಲಲಿದೆ. ಖಾಯಂ ಉದ್ಯೋಗದ ಕನಸು ಕಣ್ಣಲ್ಲಿ ಕಟ್ಟಿಕೊಂಡಿರುವ ದಿನಗೂಲಿ ನೌಕರರಿಗೆ ಇದು ನಿಜವಾದ ಗುಡ್‌ನ್ಯೂಸ್ ಆಗಿದೆ.
Latha M R Goodreturns
source: goodreturns.in
9000+ ಮ್ಯಾಗಜೀನ್ಸ್
ಎಕ್ಸ್‌ಪ್ಲೋರ್ ಮಾಡಿ
Post a Comment