ಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಧ್ಯಮವೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಅವರು ಈ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಸಂದೇಶವೆಂದು ವಿವರಿಸಿ, ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಧ್ಯಮವೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಅವರು ಈ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಸಂದೇಶವೆಂದು ವಿವರಿಸಿ, ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.ಇಂದು ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಒತ್ತಡ ಹೆಚ್ಚುತ್ತಿದೆ. ಸರ್ಕಾರದ ಪ್ರತಿ ನಡವಳಿಕೆಯಲ್ಲೂ ಒಂದು ವಿಭಜನಾ ಮನೋಭಾವನೆಯು ಕಂಡು ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ ಭಯೋತ್ಪಾದಕರು ತಮ್ಮ ಕೃತ್ಯವನ್ನು ಪ್ರಧಾನಿಗೆ ಸಂದೇಶ ಕಳಿಸುವ ಉದ್ದೇಶದಿಂದಲೇ ನಡೆಸಿದ್ದಾರೆ, ಎಂದು ವಾದ್ರಾ ಅಭಿಪ್ರಾಯಪಟ್ಟಿದ್ದಾರೆ.


ನಮ್ಮ ದೇಶದಲ್ಲಿ ಈ ಸರ್ಕಾರ ಹಿಂದುತ್ವದ ಬಗ್ಗೆ ಮಾತನಾಡುವುದನ್ನು ನಾವು ನೋಡುತ್ತೇವೆ ಮತ್ತು ಇದರಿಂದ ಅಲ್ಪಸಂಖ್ಯಾತರು ತೊಂದರೆಗೊಳಗಾಗುತ್ತಾರೆ. ಭಯೋತ್ಪಾದಕರು ಜನರ ಗುರುತನ್ನು ನೋಡಿ ಆಯ್ಕೆಮಾಡಿ ದಾಳಿ ನಡೆಸುತ್ತಿದ್ದಾರೆ. ಮುಸ್ಲಿಮರು ಅಥವಾ ಅಲ್ಪಸಂಖ್ಯಾತರು ದುರ್ಬಲರು ಎಂಬ ಸಂದೇಶವನ್ನು ಈ ಸಂಘಟನೆಗಳು ಹರಡಿಸುತ್ತಿವೆ. ಇಂತಹ ಭಾವನೆಗಳು ದೇಶದ ಜಾತ್ಯತೀತತೆಯ ಆಧಾರವನ್ನು ಕದಲಿಸುತ್ತಿವೆ. ಇಂತಹ ಸಮಯದಲ್ಲಿ ಉನ್ನತ ಮಟ್ಟದ ನಾಯಕತ್ವದಿಂದ ಎಲ್ಲ ಧರ್ಮದ ಜನರು ಭಾರತದಲ್ಲಿ ಸುರಕ್ಷಿತರಾಗಿದ್ದಾರೆ ಎಂಬ ಸ್ಪಷ್ಟ ಸಂದೇಶ ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.


ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ವಾದ್ರಾ ವಿರುದ್ಧ ಕಠಿಣ ಟೀಕೆಗಳು ಕೇಳಿಬರುತ್ತಿವೆ. ಹಲವು ಬಿಜೆಪಿ ನಾಯಕರೂ ಈ ಹೇಳಿಕೆಯನ್ನು ದೇಶದ್ರೋಹಿ ಅಭಿಪ್ರಾಯವೆಂದು ದೂರಿದ್ದಾರೆ.

Post a Comment

Previous Post Next Post