ದೇಶದ ಆರ್ಥಿಕ ರಾಜಧಾನಿ ಮುಂಬಯಿನಲ್ಲಿ ೨೬/೧೧ ರಂದು ದಾಳಿ ನಡೆದು ಇದೀಗ ೧೬ ವರ್ಷಗಳು ಸಂದಿವೆ. ಈ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ತಹವ್ವುರ್ ಹುಸೇನ್ ರಾಣಾ ಅಮೇರಿಕೆಯಲ್ಲಿ ತಲೆಮರೆಸಿಕೊಂಡಿದ್ದು, ಇದೀಗ ೧೬ ವರ್ಷಗಳ ನಂತರ ಅಮೇರಿಕೆ, ಆರೋಪಿ ರಾಣಾನ್ನು ಭಾರತ ದೇಶಕ್ಕೆ ಹಸ್ತಾಂತರಿಸಿದೆ. ಭಾರತದ ಇತರೆಡೆ ನಡೆದ ಭಯೋತ್ಪಾದಕ ದಾಳಿಗಳ ಪ್ರಮುಖ ಮಾಹಿತಿ ರಾಣಾನಿಂದ ಬಹಿರಂಗಗೊಳ್ಳುವ ಸಾದ್ಯತೆ ಇದೆ. ಇದರೊಂದಿಗೆ ಭಾರತದಲ್ಲಿ ಭಯೋತ್ಪದನಾ ಚಟುವಟಿಕೆ ನಡೆಸುವ ಉಗ್ರರಿಗೆ ತನ್ನ ದೇಶದಲ್ಲಿ ನೆಲೆ ಒದಗಿಸಿರುವ ಪಾಕಿಸ್ತಾನದ ಮುಖವಾಡ ಕಳಚುವ ಸಾಧ್ಯತೆಗಳಿವೆ. ರಾಣಾ ಹಸ್ತಾಂತರ ಭಯೋತ್ಪಾದನೆ ವಿರುದ್ಧ ಭಾರತದ ಮುಂದಿನ ಹೋರಾಟಕ್ಕೆ ಶಕ್ತಿ ತುಂಬಲಿದೆ ಎನ್ನಲಾಗುತ್ತಿದೆ.
ಭಾರತದ ಆರ್ಥಿಕ ರಾಜಧಾನಿ ಮುಂಬಯಿಗೆ ೨೦೦೮ರ ನವೆಂಬರ ೨೬ರಂದು ದೋಣಿ ಮೂಲಕ ನುಸುಳಿದ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ೧೦ ಆತ್ಮಾಹುತಿ ದಾಳಿಕೋರರು, ಮೂರು ದಿನಗಳಲ್ಲಿ ಮುಂಬಯಿನಲ್ಲಿ ಮಾರಣಹೋಮ ನಡೆಸಿದರು. ವಿದೇಶಿಯರು ಹೆಚ್ಚಾಗಿ ಸೇರುವ, ಜನಸಂದಣಿ ಇರುವ ಆರು ಸ್ಥಳಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿತ್ತು. ಅಮೇರಿಕೆಯ ಆರು ಪ್ರಜೆಗಳೂ ಸೇರಿದಂತೆ ೧೭೭ ಜನರು ಉಗ್ರರ ಗುಂಡಿಗೆ ಬಲಿಯಾಗಿದ್ದರೆ, ಸುಮಾರು ೩೦೦ ಕಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಭಾರತೀಯ ಭದ್ರತಾ ಪಡೆಯವರು ಒಂಭತ್ತು ಉಗ್ರರನ್ನು ಗುಂಡಿಕ್ಕಿ ಕೊಂದಿದ್ದರೆ, ಅಜ್ಮಲ್ ಕಸಬ್ ಎಂಬಾತ ಗಾಯಗೊಂಡು ಜೀವಂತವಾಗಿ ಸೆರೆ ಸಿಕ್ಕಿದ್ದ. ಆತನನ್ನು ೨೦೧೨ರಲ್ಲಿ ಗಲ್ಲಿಗೇರಿಸಲಾಯಿತು.
ಈ ದಾಳಿಯ ನಂತರವೂ ಭಾರತದ ವಿವಿಧ ಭಾಗಗಳಲ್ಲಿ ಉಗ್ರರು ದಾಳಿ ನಡೆಸಿ ತಮ್ಮ ಅಟ್ಟಹಾಸ ಮೆರೆದಿದ್ದರು. ಫುಲ್ವಾಮಾ ದಾಳಿಯ ನಂತರ ಮಾರನೇ ದಿನವೇ ಭಾರತ ಸರ್ಕಾರವು, ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಸರ್ಜಿಕಲ್ ಸ್ಟೆçöÊಕ್‌ನಿಂದಾಗಿ ಸುಮಾರು ೩೦೦ಕ್ಕೂ ಹೆಚ್ಚು ಉಗ್ರರನ್ನು ಜೀವಂತ ಸಮಾಧಿ ಮಾಡುವ ಮೂಲಕ ಪ್ರತ್ಯುತ್ತರ ನೀಡಿತ್ತು. ಮುಂಬಯಿ ದಾಳಿಯ ನಂತರವೂ ಇದೇ ರೀತಿ ಸರ್ಜಿಕಲ್ ಸ್ಟೆçöÊಕ್ ಮೂಲಕ ಪ್ರತ್ಯುತ್ತರ ನೀಡಿದ್ದರೆ, ಅನಮತರ ಫುಲ್ವಾಮಾ ದಾಳಿ ನಡೆಯುತ್ತಿರಲಿಲ್ಲ, ದೇಶದಲ್ಲಿ ಉಗ್ರ ಚಟುವಟಿಕೆಗಳೂ ನಡೆಯುತ್ತಿರಲಿಲ್ಲ. ಆದರೆ, ಅಂದಿನ ಸರ್ಕಾರ, ಪಾಕಿಸ್ತಾನಕ್ಕೆ ಇಂಥ ಯಾವುದೇ ಪ್ರತ್ಯುತ್ತರದ ಕ್ರಮವನ್ನು ಕೈಕೊಳ್ಳದೇ, ಭಯೋತ್ಪಾದಕ ದಾಳಿಯ ಘಟನೆಯನ್ನು ಸರ್ಕಾರ ಉಗ್ರವಾಗಿ ಖಂಡಿಸುತ್ತದೆ ಎಂಬ ಹೇಳಿಕೆಯ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತಿರುವುದಾಗಿ ಮಾತ್ರ ಹೇಳಿತು. ಅಂದು ಹೇಡಿಯಂತೆ ವರ್ತಿಸಿದ ವರ್ತನೆಯಿಂದ ಸರ್ಕಾರದ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಯಿತು. ಅಷ್ಟು ಮಾತ್ರವಲ್ಲದೇ, ಅನಂತರವೂ ದೇಶದ ವಿವಿಧ ಭಾಗಗಳಲ್ಲಿ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದನ್ನು ಇಲ್ಲಿ ಸ್ಮರಿಸಬಹುದು. ದಾಳಿಯ ನಂತರ ಮೂರು ದಿನಗಳ ವರೆಗೆ ಮುಂಬಯಿ ತನ್ನ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಸಂಪೂರ್ಣ ಸ್ಥಬ್ದಗೊಂಡಿತ್ತು. ಇದರಿಂದ ದೇಶದ ಮತ್ತು ಮಹಾರಾಷ್ಟç ಸರ್ಕಾರಗಳ ಬೊಕ್ಕಸಕ್ಕೆ ಸುಮಾರು ೩೬ ಆಸಾವಿರ ಕೋಟಿ ನಷ್ಟವಾಗಿತ್ತೆಂದು ಹೇಳಲಾಗಿತ್ತು. ಇದಕ್ಕಿಂತ ಹೆಚ್ಚಾಗಿ ಅಮಾಯಕರ ಅಮೂಲ್ಯ ಜೀವಗಳು ಉಗ್ರರ ಗುಂಡಿಗೆ ಬಲಿಯಾಗಿದ್ದು ದೇಶ ಸ್ವತಂತ್ರದ ಇತಿಹಾಸದಲ್ಲಿ ಇದೇ ಮೊದಲು.
ಪಾಕಿಸ್ತಾನದಲ್ಲಿ ಎಲ್‌ಇಟಿ, ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ ವ್ಯವಸ್ಥಿತವಾಗಿ ಆಯೋಜಿಸಿದ್ದ ಈ ದಾಳಿಯ ಮುಖ್ಯ ಸಂಚುಕೋರ ಡೇವಿಡ್ ಕೊಲೆಮನ್ ಹೆಡ್ಲಿ ಅಲಿಯಾಸ್ ದಾವುದ್ ಗಿಲಾನಿ ಎಂಬ ಅಮೇರಿಕೆಯ ಪ್ರಜೆ. ಮುಂಬಯಿ ಮತ್ತು ಡೆನ್ಮಾರ್ಕ್ನಲ್ಲಿ ಭಯೋತ್ಪಾದನಾ ದಾಳಿಗಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಅಮೇರಿಕೆ ಪೊಲೀಸರು ಈತನನ್ನು ಬಂಧಿಸಿದ್ದರು. ಆತ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತನ್ನ ಸಹಚರ ಮತ್ತು ದಾಳಿಯ ಮತ್ತೊಬ್ಬ ಸಂಚುಕೋರ ತಹವ್ವುರ್ ಹುಸೇನ್ ರಾಣಾ ಎಂಬವನ ಪಾತ್ರದ ಬಗ್ಗೆ ಬಾಯ್ಬಿಟ್ಟಿದ್ದ. ಅನಂತರ ಅಮೇರಿಕ ಪೊಲೀಸರು ಬಲೆ ಬೀಸಿ ರಾಣಾನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು.
ರಾಣಾ ಯಾರು..?
ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿರವ ೬೪ ವರ್ಷದ ತಹವ್ವುರ್ ಹುಸೇನ್ ರಾಣಾ, ಪಆಕಿಸ್ತಾನ ಪಂಜಾಬ್ ಪ್ರಾಂತದ ಸಾಹಿವಾಲ್ ಜಿಲ್ಲೆಯ ಚಿಚಾವತನಿ ಎಂಬ ನಗರದವನು. ವೈದ್ಯಕೀಯ ಪದವೀಧರನಾದ ರಾಣಾ, ಐಎಸ್‌ಐ ಸಲಹೆಯ ಮೇರೆಗೆ ಪಾಕಿಸ್ತಾನ್ ಸೇನೆಯಲ್ಲಿ ವೈದ್ಯನಾಗಿ ಒಂದಷ್ಟುಜ ಕೆಲಸ ಮಾಡಿದವ. ಅನಂತರ ೧೯೯೭ರ ಸುಮಾರಿಗೆ ಕೆನಡಾಕ್ಕೆ ವಲಸೆ ಹೋಗಿ ಅಲ್ಲಿನ ಪೌರತ್ವವನ್ನೂ ಪಡೆದಿದ್ದ. ಅನಂತರ ಅಮೇರಿಕೆಗೆ ಆಗಮಿಸಿದ ಈತ ಅಲ್ಲಿ ಒಂದು ಸಂಸ್ಥೆಯನ್ನು ಆರಂಭಿಸಿ ಈ ಮೂಲಕ ಚಿಕಾಗೋ, ನ್ಯೂಯಾರ್ಕ್, ಕೆನಡಾದ ಟೊರೆಂಟೋಗಳಲ್ಲಿ ಶಾಖೆಗಳನ್ನು ತೆರೆದು ವೀಸಾ ಸಂಬAಧಿ ಕಎಲಸ ಮಡುತ್ತಿದ್ದ.
ರಾಣಾ ಮತ್ತು ಹೆಡ್ಲಿ ಬಾಲ್ಯ ಸ್ನೇಹಿತರು. ಹೆಡ್ಲಿಯ ತಂದೆ ಪಾಕಿಸ್ತಾನಿ, ತಾಯಿ ಅಮೇರಿಕೆಯವರು. ಹೆಡ್ಲಿ ಚಿಕ್ಕಂದಿನಲ್ಲಿ ಪಾಕ್‌ನಲ್ಲೇ ಓದಿ ದೊಡ್ಡವನಾಗಿದ್ದು, ಈ ಸಂದರ್ಭದಲ್ಲಿ ರಾಣಾನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ ಈತ ಲಷ್ಕರ್ ಎ ತೊಯ್ಬಾ ಸಂಘಟನೆಯೊAದಿಗೆ ಆಕರ್ಷಿತನಾಗಿ ಭಯೋತ್ಪಾದನಾ ಚಟುವಟಿಕೆಗಳಿಂದ ದೊರೆಯುವ ಲಕ್ಷ ಲಕ್ಷ ಹಣದ ಆಸೆಗೆ ತಾನೂ ಇವರೊಂದಿಗೆ ತೊಡಗಿಸಿಕೊಂಡ. ಬಾಲ್ಯ ಸ್ನೇಹಿತ ರಾಣಾ ಕೂಡ ಇವನೊಂದಿಗೆ ಸೇರಿಕೊಂಡ. ಲಷ್ಕರ್ ಎ ತೊಯ್ಬಾ ಮತ್ತು ಹರ್ಕತ್ ಉಲ್ ಜಿಹಾದಿ ಇಸ್ಲಾಮಿಕ್ ಜತೆ ಸೇರಿ ಇಬ್ಬರೂ ಭಾರತದ, ದೆಹಲಿ, ಮುಂಬಯಿ ಮತ್ತಿತರ ಮಹಾನಗರಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಯೋಜಿಸಿದರು. ಹೆಡ್ಲಿಗೆ ಉಗ್ರರೊಂದಿಗೆ ಇರುವ ಸಂಪರ್ಕಗಳ ಬಗ್ಗೆ ರಾಣಾಗೆ ಸರಿಯಾಗಿಯೇ ಅರಿವತ್ತು ಎಂದು ತನಿಖೆಯಲ್ಲಿ ಬಹಿರಂಗಗೊAಡಿತ್ತು. ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದ ರಾಣಾ, ದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜ್, ವಿವಿಧ ನಗರಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸುತ್ತಾರೆ.
೨೦೦೮ರ ದಾಳಿ ಮೊದಲು ಪತ್ನಿಯೊಂದಿಗೆ ರಾಣಾ ಭಾರತಕ್ಕೆ ಭೇಟಿ ನೀಡಿದ್ದು, ಈ ವೇಳೆ ಉತ್ತರ ಪ್ರದೇಶದ ಹಾಪುರ, ದಎಹಲಿ, ಆಗ್ರಾ, ಕೊಚ್ಚಿ, ಅಹ್ಮದಾಬಾದ ಮತ್ತು ಮುಂಬಯಿ ಮುಂತಾದೆಡೆ ಪತ್ನಿಯೊಂದಿಗೆ ಸುತ್ತಾಡಿದ್ದ. ಈ ಭೇಟಿಯ ವೇಳೆ ಆತನ ಗೆಳೆಯ ಹೆಡ್ಲಿ ಕರೆ ಮಾಡಿದ್ದ. ಇದೇ ರೀತಿ ಎಂಟು ಸಲ ಭಾರತಕ್ಕೆ ಭೇಟಿ ನೀಡಿದ್ದ. ಪ್ರತಿ ಬಾರಿಯೂ ಭಾರತಕ್ಕೆ ಭೇಟಿ ನೀಡಿದಗ ರಾಣಾನನ್ನು ಸಂಪರ್ಕಿಸುತ್ತಿದ್ದ ಎನ್ನಲಾಗಿದೆ. ಇದೆಲ್ಲವೂ ಸಂಶಯಗಳಿಗೆ ಕಾರಣವಾಗಿದ್ದು, ದಾಳಿಯಲ್ಲಿ ರಾಣಾ ಪತ್ರದ ಬಗ್ಗೆ ಖಚಿತಪಡಿಸುತ್ತದೆ.
ಅಲ್ಲದೇ ದಾಳಿಯ ಮತ್ತೊಬ್ಬ ಸಂಚುಕೋರ ಐಎಸ್‌ಐ ಅಧಿಕಾರಿ ಮೇಜರ್ ಇಕ್ಬಾಲ್‌ನೊಂದಿಗೂ ರಾಣಾ ನಿರಂತರ ಸಂಪರ್ಕದಲ್ಲಿದ್ದ. ದಾಳಿಯ ಸಿದ್ಧತೆಗಳಿಗೆ ಅನುಕೂಲವಾಗುವಂತೆ ರಾಣಾ ಮುಂಬಯಿನಲ್ಲಿ ಒಂದು ಕೇಂದ್ರವನ್ನೇ ಆರಂಭಿಸಿದ್ದ. ಅದಕ್ಕೆ ಹೆಡ್ಲಿಯನ್ನು ಮುಖ್ಯಸ್ಥನನ್ನಾಗಿ ನೇಮಿಸಿದ್ದ ಎನ್ನಲಾಗಿದ್ದು, ಹೆಡ್ಲಿಗೆ ಭಾರತದ ವೀಸಾ ಕೂಡ ರಾಣಾನೇ ಕೊಡಿಸಿದ್ದ ಎಂಬ ಮಾಹಿತಿಗಳಿವೆ. ಭಾರತದ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವುದಕ್ಕೆ ಮತ್ತು ಇತರ ಹಣಕಾಸಿನ ನೆರವನ್ನೂ ರಾಣಾ ಹೆಡ್ಲಿಗೆ ನೀಡಿದ್ದ ಎನ್ನಲಾಗಿದೆ. ಆಂಗ್ಲ ವ್ಯಂಗಚಿತ್ರದ ಪತ್ರಿಕೆಯೊಂದು ಪ್ರವಾದಿ ಬಗ್ಗೆ ವ್ಯಂಗ್ಯಚಿತ್ರ ಪ್ರಕಟಿಸಿದ ಸಂದರ್ಭದಲ್ಲಿ ಪತ್ರಿಕೆಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಪ್ರಕರಣದ ತನಿಖಾಧಿಕಾರಿಗಳು ಮೊದಲ ಬಾರಿಗೆ ಹೆಡ್ಲಿ ಮತ್ತುರಾಣಾನನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ರಾಣಾ ಮತ್ತು ಹೆಡ್ಲಿಗೆ ಜೈಲು ಶಿಕ್ಷೆಯಾಗಿತ್ತು. ಇದೇ ಪ್ರಕರಣದ ವಿಚಾರಣೆಯಲ್ಲಿ ಮುಂಬಯಿ ದಾಳಿಯಲ್ಲಿ ರಾಣಾ ಪತ್ರವನ್ನೂ ಹೆಡ್ಲಿ ಬಾಯ್ಬಿಟ್ಟಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಣಾನನ್ನು ಹಸ್ತಾಂತರಿಸುವAತೆ ಭಾರತ ಸರ್ಕಾರ ನ್ಯಾಂಗ ಹೋರಾಟ ನಡೆಸಿತ್ತು. ಮುಂಬಯಿ ದಾಳಿಗೆ ಸಂಬAಧಿಸಿದAತೆ ತನ್ನ ಪಾತ್ರದ ಬಗ್ಗೆ ಹೆಡ್ಲಿ ಒಪ್ಪಿಕೊಂಡಿದ್ದಾನೆAದು ಹೇಳಲಾಗಿದ್ದು, ಆದರೆ ಹೆಡ್ಲಿಯ ಹೊರತಾಗಿಕೇವಲ ರಾಣಾನನ್ನು ಮಾತ್ರ ಭಾರತಕ್ಕೆ ಹಸ್ತಾಂತರಿಸಲಾಗಿದೆ. ರಾಣಾ ಹಸ್ತಾಂತರಕ್ಕೆ ೨೦೧೩ರಿಂದ ಕಳೆದ ಮಾರ್ಚ್ ವರೆಗೆ ಭಾರತ ಸರ್ಕಾರ ಸುದೀರ್ಘ ಹೋರಾಟವನ್ನೇ ನಡೆಸಿದೆ.
ಹಸ್ತಾಂತರದ ಉದ್ದೇಶ
ರಾಣಾ ಹಸ್ತಾಂತರದ ನಂತರ ಮುಂದೇನು? ರಾಣಾ ಹಸ್ತಾಂತರದಿAದ ಪಾಕಿಸ್ತಾನಕ್ಕೆ ಪುಕಪುಕ ಶುರುವಾಗಿದೆ. ತಮ್ಮ ಬಣ್ಣ ಬಯಲಾಗುವ ಬಗ್ಗೆ ಭಯವೂ ಆವರಿಸಿಕೊಂಡು ಈಗಾಗಲೇ ರಾಣಾ ಪಾಕಿಸ್ತಾನಿಯನಲ್ಲ ಎಂದು ಹೇಳತೊಡಗಿದೆ. ರಾಣಾನಿಗೆ ಭಾರತದ ನ್ಯಾಯಾಲಯದ ಮೂಲಕ ಕಸಬ್‌ನಂತೆ ಗಲ್ಲಿಗೇರಿಸಿದ ಮಾತ್ರಕ್ಕೆ ಈ ಸರ್ಕಾರದ ಕೆಲಸ ಮುಗಿಯುವದಿಲ್ಲ ಎಂಬುದೂ ಪಾಕಿಸ್ತಾನಕ್ಕೆ ತಿಳಿದಿದೆ. ಭಾರತ ಸರ್ಕಾರಕ್ಕೆ ಈ ಮೂಲಕ ಪಾಕಿಸ್ತಾನದ ಮುಖವಾಡ ಕಳಚಬೇಕಿದೆ. ವಿಶ್ವದ ಎದುರು ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆಗಳ ಪಿತಾಮಹ ಎಂದು ಘೋಷಿಸುವುದು ಭಾರತದ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಈ ಎಲ್ಲ ಮಾಹಿತಿಗಳನ್ನು ರಾಣಾ ಮೂಲಕ ಬಾಯ್ಬಿಡಿಸಬೇಕಿದೆ. ಅದು ಅಷ್ಟು ಸುಲಭವಲ್ಲ. ಯಾಕೆಂದರೆ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗುವವರು ತಮ್ಮ ಹಾಗೂ ತಮ್ಮ ಕುಟುಂಬದ ಪರಿವೇ ಇಲ್ಲದೇ, ಜೀವದ ಹಂಗು ತೊರೆದು ಉಗ್ರ ಕಾರ್ಯಾಚರಣೆ ನಡೆಸುತ್ತಾರೆ. ಮಾನವ ಬಾಂಬರುಗಳಾಗಿ ಜಿಹಾದ್‌ನಲ್ಲಿ ಪ್ರಾಣಾರ್ಪನೆ ಮಾಡುವುದನ್ನು ಕಂಡಿದ್ದೇವೆ.
ರಾಣಾ ಬಾಯ್ಬಿಡಿಸುವುದು ಅಷ್ಟು ಸುಲಭವಲ್ಲವಾದರೂ, ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು. ಈಗಾಗಲೇ ರಾಣಾ ಭಾರತದ ವಶಕ್ಕೆ ಬಂದ ನಂತರ, ಆತನಿಗೆ ಜೈಲಿನಲ್ಲಿಟ್ಟು ಬಿರಿಯಾನಿ ತಿನಿಸುವುದರಿಂದ ಉಪಯೋಗವಿಲ್ಲ ಎಂದು ದೇಶದ ಜನತೆ ಸರ್ಕರಕ್ಕೆ ಒತ್ತಾಯಿಸುತ್ತಿದ್ದಾರೆ. ದೇಶದ ಜನತೆ ಹಸ್ತಾಂತರದ ಪರಿಣಾಮ ಶೀಘ್ರಗತಿಯಲ್ಲಿ ಬಯಸುತ್ತಾರೆ. ಅದನ್ನು ನೆರವೇರಿಸುವ ದಿಸೆಯಲ್ಲಿ ಭಾರತ ಸರ್ಕಾರ ಕಾರ್ಯ ನಿರ್ವಹಿಸುವ ಮೂಲಕ ತನ್ನ ಪೌರುಷವನ್ನು ತೋರಿಸಬೇಕಿದೆ. ಪಾಕಿಸ್ತಾನ ಭಯೋತ್ಪದಕರ ಮೂಲಕ ಭಾರತದಲ್ಲಿ ಎಂಥೆAಥ ನೀಚ ಕೃತ್ಯ ಎಸಗಿ ಅದೆಷ್ಟು ಅಮಾಯಕರ ಜೀವಬಲಿ ಪಡೆದಿದೆ ಎಂಬದನ್ನೂ ಬಾಯ್ಬಿಡಿಸಿದಾಗ ಮಾತ್ರ ಉದ್ದೇಶ ಸಾರ್ಥಕವಾಗುತ್ತದೆ. ಪಾಕಿಸ್ತಾನದ ಬಣ್ಣ ಬಯಲಾಗುತ್ತದೆ.
Post a Comment