ದಣಿದಿದ್ದೇನೆ ನಾನು...!
ಹುಟ್ಟಿದಾಗಿನಿಂದ ಇಲ್ಲಿಯತನಕ...
ಬದುಕ ಅರ್ಥ ಮಾಡಿಕೊಳ್ಳುತ್ತಲೆ ..
ಎಷ್ಟೆಲ್ಲ ಯೋಚನೆಗೆ,,,ಯೋಜನೆಗೆ ನನ್ನ
ತಲೆಬಾಡಿಗೆಗೆ ಕೊಟ್ಟು ದಣಿದಿದ್ದೇನೆ!!
ನಾನು ತಳಹದಿ ಕೊಟ್ಟೇನಷ್ಟೇ..! ಅವುಗಳೊ..,,
ಮಹಡಿ ಮೇಲೆ ಮಹಡಿ ಕಟ್ಟಿ ಕೂತು ಬಿಟ್ಟಿದ್ದಾವೆ...!
ಬುಡ ಸಮೇತ ಉರುಳಿಸಿ ..
ಎಲ್ಲವನು ಖಾಲಿ ಮಾಡಿಸಿ
ಹಗುರಾಗಬೇಕಿದೆ ದಣಿದಿದ್ದೇನೆ ನಾನು !
ಹೊಸದು ಕಲಿತು..
ಅದೇನನ್ನೊ..ಅರಿತು...
ಮತ್ತೇನನ್ನೊ ಸಾಧಿಸೊ...ಜಿದ್ದಿಗೆ ಬಿದ್ದ
ಮನಸ್ಸಿಗೆ ದೀರ್ಘವಾದದೊಂದು ವಿರಾಮ ಬೇಕಿದೆ..
ಸಾವಲ್ಲದ್ದು.!
ತನ್ನ ಜನ್ಮದ ಸೊಗಸನ್ನೆ ಅರಿಯದ
ದೇಹದಾತ್ಮದ ಬಂಧ ನೋಡದ ..
ಮನುಷ್ಯನೆಂದರೆ ವಿಶೇಷವಾಗಿಯೇ ಇರಬೇಕೆಂಬ..
ಎಲ್ಲರಂತೆ...ಇರಾದೆ ಇಟ್ಟುಕೊಂಡು.,,
ದಣಿದಿದ್ದೇನೆ ನಾನು...!
ಕಣ್ಣ ಮುಚ್ಚಿ ,,ಮನಸ್ಸ ಬಿಚ್ಚಿ
ಹರವಿಕೊಂಡು..
ಚಿಂತೆಯೇ ಇಲ್ಲದ ...
ಸಂತೆಯಿಂದ ದೂರಾದ
ತಾಯ ಗರ್ಭದಂತೊಂದು ಶೂನ್ಯದಲ್ಲಿ..
ಮಲಗಬೇಕಿದೆ ...
ದಣಿದಿದ್ದೇನೆ ನಾನು..!
ಪೈಪೋಟಿಗೂ...ಪ್ರೇಮದಾಟಕೂ...
ಮೋಸದ ಕೂಪಕೂ,,
ಜವಾಬ್ದಾರಿಗಳ ಸರಪಳಿಗೂ
ಹೆದರಿ ,, ಚದುರಿ..
ಮರುಗಿ ,,ಕೊರಗಿ
ದಣಿದಿದ್ದೇನೆ ನಾನು..!
ನಾನಾಗಿಯೇ ಎದ್ದು ಬರುವ
ತನಕ ಕೂಗಬೇಡಿ ನನ್ನ...
ಇದು ನನಗೆ ನಾನೆ ಕೊಟ್ಟುಕೊಂಡಿರುವ,
ತಾತ್ಕಾಲಿಕ ಮುದ್ದು ಮರಣ...
ಎಚ್ಚರದ ಮರುಹುಟ್ಟು ನಾನೆ
ನಿಗದಿಮಾಡಿದ್ದೇನೆ..!
ಅಲ್ಲಿಯ ತನಕ ನನಗೆ
ಮರೆವಿನ ವರ ನೀಡು
ಮನವೇ..,,,
ದಣಿದಿದ್ದೇನೆ ನಾನು..!🌍🕊🌹💝
Post a Comment