ವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹವ್ವೂರ್ ರಾಣಾನನ್ನು(Tahawwur Rana) ಎನ್​ಐಎ ವಿಚಾರಣೆ ನಡೆಸುತ್ತಿದೆ. ರಾಣಾನನ್ನು ಭಾರತಕ್ಕೆ ಕರೆತಂದ ನಂತರ ತನಿಖಾ ಸಂಸ್ಥೆಯು ದಾಳಿಯ ಪಿತೂರಿಯ ಹಿಂದಿನ ರಹಸ್ಯಗಳನ್ನು ಹೊರತೆಗೆಯಲು ಅವನನ್ನು ವಿಚಾರಣೆ ನಡೆಸುತ್ತಿದೆ.

ಇದರಲ್ಲಿ ರಾಣಾ ಹಲವು ದೊಡ್ಡ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

ನವದೆಹಲಿಯ ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ ಎನ್‌ಐಎ ಪ್ರಧಾನ ಕಚೇರಿಯೊಳಗೆ ಅವರನ್ನು ಹೆಚ್ಚಿನ ಭದ್ರತೆಯ ಸೆಲ್‌ನಲ್ಲಿ ಇರಿಸಲಾಗಿದೆ. ಅವರ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನು ದಿನದ 24 ಗಂಟೆಯೂ ನಿಯೋಜಿಸಲಾಗಿದೆ.ಈತನನ್ನು ಭದ್ರತಾ ಕಾರಣಗಳಿಂದ ಕಟ್ಟುನಿಟ್ಟಿನ ಬಿಗಿ ಬಂದೋಬಸ್ತ್ ನಲ್ಲಿರಿಸಲಾಗಿದೆ. ಎನ್‌ಐಎ ಕಚೇರಿ ಈಗ ಜೈಲಿನಂತಾಗಿದೆ. ಈತನನ್ನು 14*14 ಅಳತೆಯ ಕೊಠಡಿಯಲ್ಲಿರಿಸಲಾಗಿದೆ. ಇಲ್ಲಿಗೆ ಸಿಸಿಟಿವಿ ಕಣ್ಗಾವಲು ಇದ್ದು, ಆತನ ಎಲ್ಲಾ ಚಲನವಲನಗಳನ್ನು ಪ್ರತೀಕ್ಷಣವೂ ಗಮನಿಸಲಾಗುತ್ತಿದೆ.


ಆತನನ್ನು ಇರಿಸಿರುವ ಎನ್‌ಐಎ ಕಚೇರಿಯ ಹೊರಭಾಗದಲ್ಲಿ ದೆಹಲಿ ಪೊಲೀಸರು, ಅರೆಸೈನಿಕ ಪಡೆಯಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ನೆಲದ ಮೇಲೆಯೇ ಹಾಸಿಗೆ ಹಾಕಿಕೊಡಲಾಗಿದೆ. ಅಲ್ಲಿಯೇ ಊಟ, ಸ್ನಾನ, ಶೌಚಕ್ಕೆ ವ್ಯವಸ್ಥೆ ಮಾಡಲಾಗಿದೆ. ಈತನನ್ನು ಭೇಟಿ ಮಾಡಲು ಕೇವಲ 12 ಜನ ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಆತನಿಗೆ ಹೊರಜಗತ್ತಿನ ಸಂಪರ್ಕವೇ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಸೆಲ್‌ನಲ್ಲಿ ಬಂಧಿಯಾಗಿರುವ ರಾಣಾ ಮೂರು ವಿಷಯಗಳಿಗೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.

ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ತಹವ್ವೂರ್ ರಾಣಾ ತನ್ನ ಸೆಲ್ ಒಳಗೆ ಕುರಾನ್, ಪೆನ್ನು ಮತ್ತು ಕಾಗದವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅವರಿಗೆ ಯಾವುದೇ ವಿಶೇಷ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಅಧಿಕಾರಿ ಹೇಳಿದರು. ಅವರ ಕೋರಿಕೆಯ ಮೇರೆಗೆ ಅವರಿಗೆ ಕುರಾನ್ ಪ್ರತಿಯನ್ನು ನೀಡಲಾಗಿದೆ. ಅವರು ಏಜೆನ್ಸಿಯ ಪ್ರಧಾನ ಕಚೇರಿಯಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪಿಟಿಐ ಸುದ್ದಿ ಸಂಸ್ಥೆಯ ಪ್ರಕಾರ, ತಹವ್ವೂರ್ ರಾಣಾ ಭೇಟಿಯಾದ ಜನರ ಬಗ್ಗೆ, ವಿಶೇಷವಾಗಿ ದುಬೈನಲ್ಲಿ ಪ್ರಮುಖ ಸಂಪರ್ಕ ಹೊಂದಿದ್ದ ವ್ಯಕ್ತಿಯ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಅಧಿಕಾರಿಗಳೊಂದಿಗೆ ರಾಣಾ ಅವರ ಶಂಕಿತ ಸಂಪರ್ಕಗಳು ಮತ್ತು ದಾಳಿಗಳನ್ನು ರೂಪಿಸಿದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಜತೆಗಿನ ಸಂಪರ್ಕಗಳ ಬಗ್ಗೆಯೂ ರಾಣಾ ಅವರನ್ನು ಪ್ರಶ್ನಿಸಲಾಗುವುದು.

2008 ನವೆಂಬರ್ 26ರಂದು ಮುಂಬೈ ದಾಳಿ ನಡೆಯುವ ಮೊದಲು ಉತ್ತರ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಿಗೆ ಅವರು ಭೇಟಿ ನೀಡಿದ್ದರ ಬಗ್ಗೆ ಕೆಲವು ಪ್ರಮುಖ ಸುಳಿವುಗಳನ್ನು ಪಡೆಯುವ ನಿರೀಕ್ಷೆಯನ್ನು ತನಿಖಾ ಅಧಿಕಾರಿಗಳು ಹೊಂದಿದ್ದಾರೆ. ರಾಣಾ ವಿರುದ್ಧ ಪಿತೂರಿ, ಕೊಲೆ, ಭಯೋತ್ಪಾದಕ ಕೃತ್ಯ ಎಸಗುವುದು ಮತ್ತು ನಕಲಿ ದಾಖಲೆ ಸೃಷ್ಟಿ ಸೇರಿದಂತೆ ಹಲವಾರು ಅಪರಾಧಗಳ ಆರೋಪ ಹೊರಿಸಲಾಗಿದೆ.

ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ತೀರ್ಪಿನ ನಂತರ NIA ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ರಾಣಾ 18 ದಿನಗಳ ಕಾಲ ಎನ್​ಐಎ ಕಸ್ಟಡಿಯಲ್ಲಿ ಇರುತ್ತಾರೆ. ಈ ಅವಧಿಯಲ್ಲಿ ಸಂಸ್ಥೆಯು 2008ರ ಮಾರಕ ದಾಳಿಯ ಹಿಂದಿನ ಸಂಪೂರ್ಣ ಪಿತೂರಿಯನ್ನು ಬಹಿರಂಗಪಡಿಸಲು ಅವರನ್ನು ವಿವರವಾಗಿ ಪ್ರಶ್ನಿಸುತ್ತದೆ. ಈ ದಾಳಿಯಲ್ಲಿ ಒಟ್ಟು 166 ಜನರು ಮೃತಪಟ್ಟಿದ್ದರು ಮತ್ತು 238ಕ್ಕೂ ಹೆಚ್ಚು ಜನರು ಗಾಯಗೊಂಡರು. 2009ರಲ್ಲಿ ಪ್ರಕರಣ ದಾಖಲಿಸಿದೆ.(ಏಜೆನ್ಸೀಸ್​)

Delhi Airport ಟರ್ಮಿನಲ್-3ರಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ; 50 ವಿಮಾನಗಳ ಹಾರಾಟ ವಿಳಂಬ.. 12 ಗಂಟೆ ಏರ್​ಪೋರ್ಟ್​ನಲ್ಲೆ ಸಿಲುಕಿದ ಪ್ರಯಾಣಿಕರು

Post a Comment

Previous Post Next Post